ಚಿಕ್ಕಮಗಳೂರಲ್ಲಿ ಮಗನ ಸಾವಿನ ಸುದ್ದಿ ಕೇಳಿ ಮನನೊಂದ ತಾಯಿ ಆತ್ಮಹತ್ಯೆ

ಚಿಕ್ಕಮಗಳೂರು: ಮಗನ ಸಾವಿನ ಸುದ್ದಿ ಕೇಳಿ ತಾಯಿಯೊಬ್ಬಳು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕೊಳಮಾಗೆ ಗ್ರಾಮದ ಶಮಂತ್(23) ಭದ್ರಾನದಿಯಲ್ಲಿ ಪಿಕಪ್ ವಾಹನ ಸಹಿತ ಕೊಚ್ಚಿ ಹೋಗಿದ್ದನು. ಈ ಸುದ್ದಿಯನ್ನು ಕೇಳಿದಂತ ಶಮಂತ್ ತಾಯಿ ರವಿಕಲಾ(45) ಕೆರೆಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಹಾಗೇ ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಭದ್ರಾನದಿಗೆ ಬಿದ್ದು ಕೊಚ್ಚಿ ಹೋಗಿತ್ತು. ಇನ್ನೂ ಆತನ ಮೃತದೇಹ ಪತ್ತೆಯಾಗಿಲ್ಲ. ಮಗನ … Continue reading ಚಿಕ್ಕಮಗಳೂರಲ್ಲಿ ಮಗನ ಸಾವಿನ ಸುದ್ದಿ ಕೇಳಿ ಮನನೊಂದ ತಾಯಿ ಆತ್ಮಹತ್ಯೆ