ಚಂಡೀಗಢ : ಪಾಕಿಸ್ತಾನದ ಮೂರು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರತಕ್ಕೆ ಗಡಿ ದಾಟಿದ್ದು, ಆ ಮಗುವನ್ನ ಬಿಎಸ್ಎಫ್ ಸಿಬ್ಬಂದಿ ತನ್ನ ಪೋಷಕರಿಗೆ ಹಿಂದಿರುಗಿಸಿದ್ದಾರೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಭಾರತೀಯ ಗಡಿಯಲ್ಲಿ ಮಗು ಅಳುತ್ತಿರುವುದನ್ನು ನೋಡಿದ್ದಾರೆ. ಬಿಎಸ್ಎಫ್ ಯೋಧರು ಮಗುವನ್ನು ಎತ್ತಿಕೊಂಡು ತಮ್ಮ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಮಗುವನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಡೀ ಸಂಗತಿಯೇನು..?
ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಪಡೆದ ಮಾಹಿತಿಯ ಆಧಾರದ ಮೇಲೆ, ಪಂಜಾಬ್‌ನ ಫಿರೋಜ್ಪುರ ಸೆಕ್ಟರ್‌ನ ಗಡಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕ ಆಕಸ್ಮಿಕವಾಗಿ ಗಡಿಯನ್ನ ದಾಟಿ ಭಾರತಕ್ಕೆ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ.

ಶುಕ್ರವಾರ ಸಂಜೆ 7 ಗಂಟೆಗೆ ಭಾರತೀಯ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ಮಗುವನ್ನ ಗುರುತಿಸಿದ್ದಾರೆ. ಯೋಧರ ಪ್ರಕಾರ, ಮಗು ಅಳುವುದನ್ನ ಮತ್ತು “ಪಾಪಾ, ಪಾಪಾ” ಎಂದು ಹೇಳುವುದನ್ನ ನೋಡಿದೆ. ನಂತ್ರ ಜವಾನನೊರ್ವ ಮಗುವನ್ನ ಎತ್ತಿಕೊಂಡು ಘಟನೆಯ ಬಗ್ಗೆ ಬಿಎಸ್ಎಫ್ ಫೀಲ್ಡ್ ಕಮಾಂಡರ್‌ಗೆ ಮಾಹಿತಿ ನೀಡಿದ್ದಾರೆ.

ಹೆತ್ತವರ ಮಡಿಲು ಸೇರಿದ ಮಗು..!
ಘಟನೆಯ ಬಗ್ಗೆ ಜವಾನನು ತನ್ನ ಮೇಲಧಿಕಾರಿಗೆ ತಿಳಿಸಿದಾಗ, ಈ ಬಗ್ಗೆ ತನಿಖೆ ನಡೆಸಿದ ನಂತ್ರ ಬಿಎಸ್ಎಫ್ ಫೀಲ್ಡ್ ಕಮಾಂಡರ್ ಮಗುವನ್ನ ತನ್ನ ಹೆತ್ತವರಿಗೆ ಪಾಕಿಸ್ತಾನಕ್ಕೆ ಕಳುಹಿಸಲು ಬಯಸಿದ್ದರು.

ಇದಕ್ಕಾಗಿ, ಬಿಎಸ್ಎಫ್ ಫೀಲ್ಡ್ ಕಮಾಂಡರ್ ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ತಕ್ಷಣದ ಧ್ವಜ ಸಭೆಯನ್ನ ನಡೆಸಲು ಮುಂದಾಗಿದ್ದು, ಈ ಮೂಲಕ ಅಳುತ್ತಿರುವ ಮಗು ಆದಷ್ಟು ಬೇಗ ಪೋಷಕರ ಮಡಿಲು ಸೇರಿದೆ. ಧ್ವಜ ಸಭೆಯನ್ನ ನಡೆಸುವ ಪ್ರಸ್ತಾಪದ ನಂತ್ರ ಅಧಿಕಾರಿಗಳು ಮಗುವನ್ನ ಪಾಕಿಸ್ತಾನದ ರೇಂಜರ್‌ಗಳ ಮುಂದೆ ತಂದೆಗೆ ಮಗುವನ್ನ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share.
Exit mobile version