ವಿಜಯಪುರ : ನಡೆದಾಡುವ ದೇವರು ‘ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ ಆಶ್ರಮದಲ್ಲಿ ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಭಕ್ತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ 5 ಕ್ವಿಂಟಾಲ್ ಶ್ರೀಗಂಧವನ್ನು ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ ನೀಡಿದ್ದಾರೆ.

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಅಂತಿಮ ಕ್ರಿಯೆಗೆ ಈಗಾಗಲೇ ಸಕಲ ಸಿದ್ದತೆ ನಡೆಸಲಾಗಿದೆ.ವಿಜಯಪುರ ಜಿಲ್ಲೆಯ ಕೋಲ್ಲಾರ ಪಟ್ಟಣದ ಸಿದ್ದಪ್ಪ ಬಾಲಗೊಂಡ ಎಂಬುವರು ತಮ್ಮ ಹೊಲದಲ್ಲಿ ಬೆಳೆದ 5 ಕ್ವಿಂಟಾಲ್ ಶ್ರೀ ಗಂಧದ ಮರಗಳನ್ನು ಶ್ರೀಗಳ ಅಂತ್ಯಕ್ರಿಯೆಗೆ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ.

ಈಗಾಗಲೇ ಅಗಲಿದ ಶ್ರೀಗಳಿಗೆ ರಾಜ್ಯ ಸರ್ಕಾರದಿಂದ ಗೌರವ ನಮನ ಸಲ್ಲಿಕೆಯಾಗಿದೆ.ವಿಜಯಪುರದಲ್ಲಿ ಸೈನಿಕ ಶಾಲೆ ಆವರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಗಲಿದ ಶ್ರೀಗಳಿಗೆ ಸರ್ಕಾರಿ ಗೌರವ ನಮನ ಸಲ್ಲಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅಂತಿನ ನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ನಿಂದ ರಾಷ್ಟ್ರಗೀತೆ ಮೂಲಕ ಸ್ವಾಮೀಜಿಗೆ ನಮನ ಸಲ್ಲಿಸಲಾಯಿತು. ನಂತರ ಸಿಎಂ ಬೊಮ್ಮಾಯಿ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಇದಾದ ಬಳಿಕ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಜ್ಞಾನಯೋಗಾಶ್ರಮದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ. ಶ್ರೀಗಳನ್ನು ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಿಸಿ ಅಗ್ನಿಸ್ಪರ್ಶ ಮಾಡಲು ಸಕಲ ಸಿದ್ದತೆ ನಡೆಸಲಾಗಿದ್ದು, ಬಲಭಾಗಕ್ಕೆ ಸಿಎಂ ಸೇರಿ ವಿಐಪಿಗಳಿಗೆ ಕೂರಲು ಅವಕಾಶ ಮಾಡಿಕೊಡಲಾಗಿದೆ. 1000 ಜನರಿಗೆ ಶ್ರೀಗಳ ವಿಧಿ ವಿಧಾನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನೂ, ಭಕ್ತರಿಗೆ ಎಲ್ ಇಡಿ ಸ್ಕ್ರೀನ್ ಮೂಲಕ ಅಂತಿಮ ಕ್ರಿಯೆ ನೋಡುವ ಅವಕಾಶ ನೀಡಲಾಗಿದೆ. ವಿಧಿ ವಿಧಾನ ನೆರವೇರುವ ಜಾಗದಲ್ಲಿ ಭಕ್ತರು ರಂಗೋಲಿ ಬಿಡಿಸುತ್ತಿದ್ದಾರೆ.

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಇದ್ದ ತಪೋವನದಲ್ಲೀಗ ನಿರವಮೌನ ಆವರಿಸಿದೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಹಾಗೂ ಯಾವುದೇ ಕಾರ್ಯಕ್ರಮಗಳು ಇದ್ದರು ಅವರ ವಾಸ್ತವ್ಯ ಧಾರವಾಡದ ತಪೋವನ. ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಹತ್ವ ನೀಡಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಅತ್ಯಂತ ಪ್ರೀತಿ ಹಾಗೂ ಸಂತಸದಿಂದ ನಿಸರ್ಗದಲ್ಲಿ ವಾತಾವರಣವನ್ನ ಅನುಭವಿಸುತ್ತಿದ್ದರು. ಮಹಾತಪಸ್ವಿ ಕುಮಾರೇಶ್ವರ ಸ್ವಾಮೀಜಿಗಳ ತಪೋವನ ಅಂದರೆ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಪಂಚ ಪ್ರಾಣವಾಗಿತ್ತು. ಯಾವುದೇ ಅಹಂ ಇಲ್ಲದೇ ಸರಳರಲ್ಲಿ ಸರಳರಾಗಿ ತಮ್ಮ ಆಘಾದವಾದ ಜ್ಞಾನ ಸು಼ಧೆಯನ್ನ ಜನರಿಗೆ ನೀಡುತಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಈ ಸ್ಥಳವೂ ಒಂದು ಪ್ರೇರಣೆಯಾಗಿತ್ತು.

BREAKING NEWS : ಲಿಂಗೈಕ್ಯರಾದ ‘ಸಿದ್ದೇಶ್ವರ ಶ್ರೀ’ಗಳಿಗೆ ರಾಜ್ಯ ಸರ್ಕಾರದಿಂದ ಗೌರವ ನಮನ ಸಲ್ಲಿಕೆ |Siddeshwara Swamiji

ಜ.5ರಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ಆರಂಭ – HDK

Share.
Exit mobile version