ತುಮಕೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

ತುಮಕೂರು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರೊಂದು ಧಗಧಗಿಸಿ ಹೊತ್ತಿ ಉರಿದಿರುವಂತ ಘಟನೆ ನಡೆದಿದೆ. ಈ ಬೆಂಕಿ ದುರಂತದಿಂದ ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಯಲ್ಲಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಮಕೂರಿನಿಂದ ಹೊಸದುರ್ಗದ ಕಡೆಗೆ ಸಾಗುತ್ತಿದ್ದಂತ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಕಾರಿನಿಂದ ಚಾಲಕ ಹೇಮಂತ್ ಎಂಬುವರು ಕೆಳಗೆ ಇಳಿದಿದ್ದಾರೆ. ಕಾರಿನ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇತರೆಡೆ ವ್ಯಾಪಿಸಿದ ಪರಿಣಾಮ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲೇ ಧಗಧಗಿಸಿ ಹೊತ್ತಿ … Continue reading ತುಮಕೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು