ಚಂಬಾ: ಹಿಮಾಚಲ ಪ್ರದೇಶದ ಚಂಬಾ ಪಟ್ಟಣದಲ್ಲಿ ಭಾರೀ ಹಿಮಪಾತದ ನಡುವೆ ಮದುವೆ ಮೆರವಣಿಗೆಯ ವಿಡಿಯೋವೊಂದು ಈಗ ವೈರಲ್ ಆಗಿದೆ. ಹೌದು, ಸುಮಾರು 4 ಅಡಿಗಳಷ್ಟು ಹಿಮದಿಂದ ಆವೃತವಾಗಿರುವ ರಸ್ತೆಗಳು ಮದ್ಯೆದಲ್ಲಿ, ಹಿಮಪಾತವನ್ನು ಲೆಕ್ಕಿಸದೆ, ವಧು-ವರನನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ವಿವಾಹ ಕಾರ್ಯವನ್ನು ನೇರವೇರಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ವರನನ್ನು ಪಲಕ್ಕಿಯಲ್ಲಿ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ. ಇನ್ನು ಕೆಲವರು ಛತ್ರಿ ಹಿಡಿದು ಡೊಳ್ಳು, ಕೊಳಲು ನಾದವನ್ನು ನುಡಿಸುತ್ತಿದ್ದಾರೆ. ಅಂದ ಹಾಗೇ ಇಲ್ಲಿ ಮದುವೆಯಲ್ಲಿ, ಕೆಲವು ಆಚರಣೆಗಳನ್ನು ಕೈಗೊಳ್ಳಲು ನಿರ್ದಿಷ್ಟ ಸಮಯವನ್ನು ನಿರ್ಧರಿಸಲಾಗುತ್ತದೆ, ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ಆಚರಣೆಗಳನ್ನು ನಡೆಸದಿದ್ದರೆ, ಮದುವೆಯನ್ನೇ ನಿಲ್ಲಿಸಲಾಗುತ್ತದೆಯಂತೆ. ಆದ್ದರಿಂದ, ‘ಫೆರಾಸ್’ ಅನ್ನು ಸಮಯಕ್ಕೆ ತಲುಪುವ ಇಚ್ಛೆಯೊಂದಿಗೆ, ದಟ್ಟವಾದ ಹಿಮದ ನಡುವೆ ಈ ಕೆಲಸವನ್ನು ಮಾಡಲಾಗಿದೆಯಂತೆ.
ಶಾಲೆಯಲ್ಲೇ ವಿದ್ಯಾರ್ಥಿನಿ ಜೊತೆಗೆ ರೊಮ್ಯಾನ್ಸ್ ಮಾಡಿದ ‘ಹಳ್ಳಿಮೇಷ್ಟ್ರು’ : ವಿಡಿಯೋ ವೈರಲ್