Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಪಾಟ್ನಾ ಕೋಚಿಂಗ್ ಸೆಂಟರ್ ಗುಂಡಿನ ದಾಳಿ ಪ್ರಕರಣ: ಖಾನ್ ಸರ್ ಬಂಧನದ ಮೇಲೆ ನ್ಯಾಯಾಲಯದ ತಡೆಯಾಜ್ಞೆ

ರಾಜ್ಯದ ವಿಧಾನಸಭಾ ಕ್ಷೇತ್ರವಾರು ಬೂತ್ ಮಟ್ಟದ ಏಜೆಂಟರ (BLA) ಸಂಪೂರ್ಣ ಪಟ್ಟಿ ಕೋರಿ ಸಿಇಒಗೆ ಪತ್ರ ಬರೆದ ರಮೇಶ್ ಬಾಬು

ಎಚ್ಚರ! ಬೆಳಗಿನ ಜಾವ ಕಾಣಿಸಿಕೊಳ್ಳುವ ಕಿಡ್ನಿ ಹಾನಿಯ 5 ಲಕ್ಷಣಗಳಿವು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ವಿಧಾನಸಭಾ ಕ್ಷೇತ್ರವಾರು ಬೂತ್ ಮಟ್ಟದ ಏಜೆಂಟರ (BLA) ಸಂಪೂರ್ಣ ಪಟ್ಟಿ ಕೋರಿ ಸಿಇಒಗೆ ಪತ್ರ ಬರೆದ ರಮೇಶ್ ಬಾಬು
KARNATAKA

ರಾಜ್ಯದ ವಿಧಾನಸಭಾ ಕ್ಷೇತ್ರವಾರು ಬೂತ್ ಮಟ್ಟದ ಏಜೆಂಟರ (BLA) ಸಂಪೂರ್ಣ ಪಟ್ಟಿ ಕೋರಿ ಸಿಇಒಗೆ ಪತ್ರ ಬರೆದ ರಮೇಶ್ ಬಾಬು

By ವಸಂತ ಬಿ ಈಶ್ವರಗೆರೆ
ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಚುನಾವಣಾ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖ ದಾಖಲೆಗಳನ್ನು ಉಚಿತವಾಗಿ ಒದಗಿಸುವಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ ಈ ಕೆಳಗಿನ ಪ್ರಮುಖ ಮಾಹಿತಿ ಹಾಗೂ ದಾಖಲೆಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ:

ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಬೇಡಿಕೆಗಳು:

  • ಅಂತಿಮ ಮತದಾರರ ಪಟ್ಟಿ: 05.01.2025 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯ ಮೃದು ಪ್ರತಿ (Soft Copy) ಹಾಗೂ ಮುದ್ರಿತ ಪ್ರತಿಯನ್ನು (Printed Copy) ಒದಗಿಸಬೇಕು.

  • ಪೂರಕ ಪಟ್ಟಿಗಳು: ಅಂತಿಮ ಪಟ್ಟಿ ಪ್ರಕಟವಾದ ನಂತರ ಬಿಡುಗಡೆ ಮಾಡಲಾದ ಎಲ್ಲಾ ಆರು ಪೂರಕ ಮತದಾರರ ಪಟ್ಟಿಗಳ (Supplementary Electoral Rolls) ಪ್ರತಿಗಳನ್ನು ನೀಡಬೇಕು.

  • ಸೇರ್ಪಡೆ/ಕಡಿತದ ವಿವರ: ಆರು ಪೂರಕ ಪಟ್ಟಿಗಳಲ್ಲಿ ನಡೆದಿರುವ ವಿಧಾನಸಭಾ ಕ್ಷೇತ್ರವಾರು ಮತ್ತು ಭಾಗವಾರು (Part-wise) ಮತದಾರರ ಹೆಸರು ಸೇರ್ಪಡೆ, ಕೈಬಿಡುವಿಕೆ (Deletions), ತಿದ್ದುಪಡಿ ಹಾಗೂ ವರ್ಗಾವಣೆಗಳ ಸಂಪೂರ್ಣ ವಿವರಗಳನ್ನು ಒದಗಿಸಬೇಕು.

  • ಬೂತ್ ಮಟ್ಟದ ಏಜೆಂಟರ (BLA) ಪಟ್ಟಿ: ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆವಾರು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟರ ಪಟ್ಟಿ ಹಾಗೂ ಅವರ ಅಧಿಕಾರದ ಅವಧಿಯ ವಿವರಗಳನ್ನು ನೀಡಬೇಕು.

  • ಮಾರ್ಗಸೂಚಿಗಳು: ಬೂತ್ ಮಟ್ಟದ ಏಜೆಂಟರ ನೇಮಕಾತಿ ಮತ್ತು ಅವರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊರಡಿಸಿರುವ ಎಲ್ಲಾ ಸುತ್ತೋಲೆಗಳು, ಸೂಚನೆಗಳು ಹಾಗೂ ಅಧಿಸೂಚನೆಗಳ ಪ್ರತಿಗಳನ್ನು ಒದಗಿಸಬೇಕು.

ಜನಪ್ರತಿನಿಧಿ ಕಾಯ್ದೆ 1950 ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಅಡಿಯಲ್ಲಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯ ಪ್ರತಿಗಳನ್ನು ಪಡೆಯುವ ಹಕ್ಕಿರುತ್ತದೆ. ಮತದಾರರ ಪಟ್ಟಿ ಸಾರ್ವಜನಿಕ ದಾಖಲೆಯಾಗಿರುವುದರಿಂದ ಈ ಎಲ್ಲಾ ಮಾಹಿತಿಯನ್ನು ಉಚಿತವಾಗಿ ಮತ್ತು ಆದಷ್ಟು ಬೇಗ ಒದಗಿಸಿಕೊಡಬೇಕೆಂದು ರಮೇಶ್ ಬಾಬು ಅವರು ಮುಖ್ಯ ಚುನಾವಣಾಧಿಕಾರಿಗಳನ್ನು ಪತ್ರದಲ್ಲಿ ಆಗ್ರಹಿಸಿದ್ದಾರೆ.

Share. Facebook Twitter LinkedIn WhatsApp Email

Related Posts

SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೀಚಕ ಕೃತ್ಯ: ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

2 Mins Read

BREAKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಮದ್ಯ ಕುಡಿಸಿ ಮಹಿಳೆ ಮೇಲೆ ಗ್ಯಾಂಗ್ ರೇಪ್ : 10 ಆರೋಪಿಗಳು ಅರೆಸ್ಟ್!

2 Mins Read

BREAKING : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ: ಬಾಗಲಕೋಟೆಯ ಸರ್ಕಾರಿ ನೌಕರನಿಗೆ ₹83.82 ಲಕ್ಷ ನಾಮ!

2 Mins Read
Recent News

​ಪಾಟ್ನಾ ಕೋಚಿಂಗ್ ಸೆಂಟರ್ ಗುಂಡಿನ ದಾಳಿ ಪ್ರಕರಣ: ಖಾನ್ ಸರ್ ಬಂಧನದ ಮೇಲೆ ನ್ಯಾಯಾಲಯದ ತಡೆಯಾಜ್ಞೆ

ರಾಜ್ಯದ ವಿಧಾನಸಭಾ ಕ್ಷೇತ್ರವಾರು ಬೂತ್ ಮಟ್ಟದ ಏಜೆಂಟರ (BLA) ಸಂಪೂರ್ಣ ಪಟ್ಟಿ ಕೋರಿ ಸಿಇಒಗೆ ಪತ್ರ ಬರೆದ ರಮೇಶ್ ಬಾಬು

ಎಚ್ಚರ! ಬೆಳಗಿನ ಜಾವ ಕಾಣಿಸಿಕೊಳ್ಳುವ ಕಿಡ್ನಿ ಹಾನಿಯ 5 ಲಕ್ಷಣಗಳಿವು

ರೂ.370 ಬಿರಿಯಾನಿ ಹೇಳಿಕೆಗೆ ಯುವಕ ಟ್ರೋಲ್‌: ಎಡವಟ್ಟಿನಿಂದ ಹೋಯ್ತು ಇದ್ದ ಒಂದು ಕೆಲಸ

State News
KARNATAKA

ರಾಜ್ಯದ ವಿಧಾನಸಭಾ ಕ್ಷೇತ್ರವಾರು ಬೂತ್ ಮಟ್ಟದ ಏಜೆಂಟರ (BLA) ಸಂಪೂರ್ಣ ಪಟ್ಟಿ ಕೋರಿ ಸಿಇಒಗೆ ಪತ್ರ ಬರೆದ ರಮೇಶ್ ಬಾಬು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಚುನಾವಣಾ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖ ದಾಖಲೆಗಳನ್ನು ಉಚಿತವಾಗಿ…

SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೀಚಕ ಕೃತ್ಯ: ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

BREAKING : ರಾಜ್ಯದಲ್ಲಿ ಪೈಶಾಚಿಕ ಕೃತ್ಯ : ಮದ್ಯ ಕುಡಿಸಿ ಮಹಿಳೆ ಮೇಲೆ ಗ್ಯಾಂಗ್ ರೇಪ್ : 10 ಆರೋಪಿಗಳು ಅರೆಸ್ಟ್!

BREAKING : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ: ಬಾಗಲಕೋಟೆಯ ಸರ್ಕಾರಿ ನೌಕರನಿಗೆ ₹83.82 ಲಕ್ಷ ನಾಮ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.