ದಾವಣಗೆರೆ : ದಾವಣಗೆರೆಯಲ್ಲಿ ಗ್ಯಾಂಗ್ ರೇಪ್ ಆಗಿರುವ ಶಂಕೆ ವ್ಯಕ್ತವಾಗಿದ್ದು, 10 ಯುವಕರು ಇದೀಗ ಅರೆಸ್ಟ್ ಆಗಿದ್ದಾರೆ. ಜೂನ್ 3 ರಂದು ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಿಡಿಗೇಡಿಗಳು ವಿಡಿಯೋ ಹರಿಬಿಟ್ಟಿದ್ದಾರೆ.
ವಿಡಿಯೋ ಹರಿಬಿಟ್ಟವರನ್ನು ಚೆನ್ನಗಿರಿಯ ಬಸವಪಟ್ಟಣ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಘಟನಾ ಸ್ಥಳಕ್ಕೆ ಎಸ್ಪಿ ಎಚ್ಟಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಿರುವ ಪೊಲೀಸರು ವೈದ್ಯಕೀಯ ವರದಿ ಬಂದ ಬಳಿಕ ಗ್ಯಾಂಗ್ ರೇಪ್ ಬಗ್ಗೆ ಸತ್ಯಾ ಸತ್ಯತೆ ತಿಳಿದು ಬರಲಿದೆ.








