ಬೆಂಗಳೂರು : ಮಂಗಳೂರಿನ ಉದ್ಯಮಿಗೆ ಕಾಂಗ್ರೆಸ್ ಮುಖಂಡ ಒಬ್ಬ ಹನಿ ಟ್ರ್ಯಾಕ್ಪ್ ಮಾಡಿರುವ ಪ್ರಕರಣ ಬಳಕೆಗೆ ಬಂದಿದೆ. ಅಶ್ಲೀಲ ವಿಡಿಯೋ ಬಳಸಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಉದ್ಯಮೀಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನಿಜಾಂ ಹಾಗು ಜಿತೇಶ್ ಎಂಬುವವರು ಉದ್ಯಮಿಯನ್ನ ಹನಿಟ್ರ್ಯಪ್ ಮಾಡಿ ಹಣ ವಸೂಲಿ ಮಾಡಿರುತ್ತಾನೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡ ಎರಡು ಕೋಟಿ 77 ಲಕ್ಷ ಹಣ ವಸೂಲಿ ಮಾಡಿದ್ದಾನೆ, ಇದೀಗ ಊರ್ವ ಠಾಣೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
2024ರಲ್ಲಿಯೇ ಉದ್ಯಮಿ ಜಿತೇಶ್ ಗೆ ಹನಿ ಟ್ರ್ಯಾಪ್ ಗೆ ಖೆಡ್ಡ ತೋಡಿದ್ದ ಜಿತೇಶ್ ಅಶ್ಲೀಲ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೇ. 35 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೇ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್ಗೆ ಉದ್ಯಮಿ ಹಣ ನೀಡಿದ್ದಾನೆ ಮತ್ತೆ ಮತ್ತೆ ಹಣ ಕೇಳಿದಾಗ ಕಾಂಗ್ರೆಸ್ ಮುಖಂಡ ನಿಜಾಮ್ಗೆ ಉದ್ಯಮಿ ಮಾಹಿತಿ ಕೊಡುತ್ತಾನೆ ಯುವ ಕಾಂಗ್ರೆಸ್ ಮುಖಂಡ ನಿಜಾಮ್ಗೆ ಉದ್ಯಮಿಯಿಂದ ಮಾಹಿತಿ ನೀಡಲಾಗಿದೆ ಆದರೆ ಜಿತೇಶ್ ಜೊತೆ ಸೇರಿಕೊಂಡ ನಿಜಾಂ ಉದ್ಯಮಿಗೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದು ಬಳಿಕ ಹಂತ ಹಂತವಾಗಿ ಕೋಟಿ ಕೋಟಿ ಹಣ ವಸೂಲಿ ಮಾಡಿದ್ದಾರೆ.
ಕೋಟಿ ಕೋಟಿ ಹಣ ವಸೂಲಿ ಮಾಡಲು ಆತ್ಮಹತ್ಯೆ ಕಥೆ ಕಟ್ಟಿದ್ದಾರೆ. ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ನಿಜಾಂ ಹೇಳಿದ್ದಾನೆ 2024 ಮೇ ತಿಂಗಳಲ್ಲಿ ನಿಜಾಮ್ ಆತ್ಮಹತ್ಯೆಯ ಕಥೆ ಹೆಣದಿದ್ದ. ಡೆತ್ ನೋಟ್ನಲ್ಲಿ ಉದ್ಯಮಿ ಹೆಸರು ಬರೆದಿರುವುದಾಗಿ ಆ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಿಜಾಂ ಕತೆ ಕಟ್ಟಿದ್ದ. ಆತ್ಮಹತ್ಯೆ ಕಥೆ ಸಾಬೀತು ಮಾಡಲು ಖತರ್ನಾಕ್ ಪ್ಲಾನ್ ಕೂಡ ಮಾಡಿದ್ದ ಎನ್ನಲಾಗಿದೆ.
ಈ ಒಂದು ಆತ್ಮಹತ್ಯೆ ಕಥೆ ಎಲ್ಲಿವರೆಗೂ ಹೋಗುತ್ತೆ ಎಂದರೆ ಆ ನಕಲಿ ಫೋಟೋಗಳನ್ನು ತೋರಿಸಿ ಜಿತೇಶ್, ನೇಣಿಗೆ ಶರಣಾದ ರೀತಿ ಆತನ ಅಂತ್ಯಕ್ರಿಯೆ ನಡೆದಂತಹ ಫೋಟೋ ಇದೆಲ್ಲ ಆತ್ಮಹತ್ಯೆ ಕಥೆಯನ್ನು ಸೃಷ್ಟಿ ಮಾಡಿ ನಕಲಿ ಫೋಟೋ ತೋರಿಸಿ ಕೇಸ್ ಹಾಕಿಸಿ ಜೈಲಿಗೆ ತಳ್ಳುವ ಬೆದರಿಕೆ ಹಾಕಿ ಕೋಟಿ ಕೋಟಿ ಹಣ ಮಸೂಲಿ ಮಾಡಿದ್ದಾರೆ. 2024 ರಿಂದ 2026 ರ ವರೆಗೆ ಎರಡು ವರ್ಷದವರೆಗೆ ಈ ರೀತಿ ಹಣ ವಸೂಲಿ ಮಾಡಿದ್ದಾರೆ. ಆದರೆ ಜೂನ್ 1ರಂದು ಮಂಗಳೂರಿನಲ್ಲಿ ಉದ್ಯಮಿಗೆ ಚಿತೇಶ್ ಸಿಕ್ಕಿದ್ದಾನೆ ಜಿತೇಶ್ ಜೀವಂತ ಇರುವುದನ್ನು ನೋಡಿ ಉದ್ಯಮಿಗೆ ಶಾಕ್ ಆಗಿದೆ. ಇದೀಗ ಮಂಗಳೂರಿನ ಊರ್ವ ಠಾಣೆಗೆ ಉದ್ಯಮಿ ದೂರು ಕೊಟ್ಟಿದ್ದಾರೆ. ಸದ್ಯ ನಿಜಾಂ ಮತ್ತು ಜಿತೇಶ್ ನನ್ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.








