ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನದ ಕುತಂತ್ರದ ವಿರುದ್ಧ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೆಲವು ಸಂಘಟನೆಗಳನ್ನು ‘ಫಿತ್ನಾ ಅಲ್-ಹಿಂದೂಸ್ತಾನ್’ ಎಂದು ಹೆಸರಿಸುವಂತೆ ಪಾಕಿಸ್ತಾನದ ಸರ್ಕಾರಿ ಏಜೆನ್ಸಿಗಳಿಗೆ ನೀಡಲಾದ ನಿರ್ದೇಶನಗಳನ್ನು ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ.
ಪಾಕಿಸ್ತಾನವು ತನ್ನ “ತಪ್ಪು ಮಾಹಿತಿ ಮತ್ತು ಅಪಪ್ರಚಾರವನ್ನು” ಧಾರ್ಮಿಕ ಲೇಪನ ಕೊಟ್ಟು ಹೇಗೆ ಮರೆಮಾಚುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಭಾರತೀಯ ಪ್ರತಿನಿಧಿ ಹೇಳಿದರು.
”ಇದು ಪಾಕಿಸ್ತಾನದ ‘ಡೀಪ್ ಸ್ಟೇಟ್’ (ರಹಸ್ಯ ಅಧಿಪತ್ಯ) ರೂಪಿಸುತ್ತಿರುವ ‘ದ್ವೇಷದ ಸಂಘಟಿತ ಕಾರ್ಖಾನೆ’ಯ ಫಲಿತಾಂಶವಾಗಿದೆ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮುಂದುವರಿಸಲು, ಪಾಕಿಸ್ತಾನದ ನಾಗರಿಕರನ್ನು ಭಾರತದ ವಿರುದ್ಧ ಶಾಶ್ವತ ದ್ವೇಷದ ಸ್ಥಿತಿಯಲ್ಲಿಡಲು ಈ ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ, ದೇಶದ ಮೂಲಭೂತ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆ” ಎಂದು ಪರ್ವತನೇನಿ ಅವರು ವಿಶ್ವಸಂಸ್ಥೆಯಲ್ಲಿ ತೀಕ್ಷ್ಣವಾಗಿ ನುಡಿದರು.
Subscribe to Updates
Get the latest creative news from FooBar about art, design and business.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತೀಕ್ಷ್ಣ ತಿರುಗೇಟು: ‘ಫಿತ್ನಾ ಅಲ್-ಹಿಂದೂಸ್ತಾನ್’ ಪದಬಳಕೆಗೆ ತೀವ್ರ ವಿರೋಧ!
By ಗೋಪಾಲ್ ಎನ್








