Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಮೇಲೆ ನಿರಂತರ ನಿಗಾ: 16 ತಿಂಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದ ಪಾಕಿಸ್ತಾನ

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ
KARNATAKA

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

By kannadanewsnow57

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಎರಡು ತಿಂಗಳ ಪಡಿತರ ಅಕ್ಕಿ ಪಡೆಯಲು ಫಲಾನುಭವಿಗಳು ಎರಡು ಬಾರಿ ಬೆರಳಚ್ಚು ನೀಡುವ ಅಗತ್ಯವಿಲ್ಲ. ಕೇವಲ ಒಂದೇ ಬಾರಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅಕ್ಕಿ ಪಡೆಯಬಹುದಾಗಿದೆ.

ಕಳೆದ ತಿಂಗಳು ಪಡಿತರ ವಿತರಣೆಯ ವೇಳೆ ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳ ಕಾರಣ ಅನೇಕ ಫಲಾನುಭವಿಗಳು ಸಂಕಷ್ಟ ಅನುಭವಿಸಿದ್ದರು. ವಿಶೇಷವಾಗಿ ಎರಡು ತಿಂಗಳ ಅಕ್ಕಿಯನ್ನು ಒಟ್ಟಿಗೆ ವಿತರಿಸುತ್ತಿದ್ದರಿಂದ ಎರಡು ಬಾರಿ ಬೆರಳಚ್ಚು ಪಡೆಯುವ ಪ್ರಕ್ರಿಯೆ ಜನರಿಗೆ ತೊಂದರೆ ಉಂಟುಮಾಡಿತ್ತು.

ಈ ಸಮಸ್ಯೆ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ಆಹಾರ ಇಲಾಖೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಹೊಸ ಮಾರ್ಗಸೂಚಿ ನೀಡಿದೆ. ಅದರಂತೆ, ಫಲಾನುಭವಿಗಳಿಂದ ಕೇವಲ ಒಂದು ಬಾರಿ ಬೆರಳಚ್ಚು ಪಡೆದು ಎರಡು ತಿಂಗಳ ಅಕ್ಕಿಯನ್ನು ವಿತರಿಸಬೇಕು ಎಂದು ಸೂಚಿಸಲಾಗಿದೆ.
ಮೇ-ಜೂನ್ ತಿಂಗಳ ಅಕ್ಕಿ ಒಂದೇ ಬಾರಿ ವಿತರಣೆ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಈಗಾಗಲೇ ಒಟ್ಟಿಗೆ ವಿತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಪಾಲಿನ ಅಕ್ಕಿ ಮೊದಲು ನೀಡಲಾಗಿದ್ದರೂ, ರಾಜ್ಯದ ಪಾಲಿನ ಅಕ್ಕಿ ವಿತರಣೆ ಬಾಕಿ ಉಳಿದಿತ್ತು.ಈಗ ಮೇ ಮತ್ತು ಜೂನ್ ತಿಂಗಳ ರಾಜ್ಯದ ಪಾಲಿನ ಅಕ್ಕಿಯನ್ನು ಜೂನ್ ತಿಂಗಳಲ್ಲೇ ಒಟ್ಟಿಗೆ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಫಲಾನುಭವಿಗಳಿಗೆ ಸುಗಮ ಸೇವೆ ಒದಗಿಸಲು ಹೊಸ ಕ್ರಮ ಕೈಗೊಳ್ಳಲಾಗಿದೆ.
ಪಡಿತರ ಪಡೆಯುವ ಸಮಯದಲ್ಲೂ ಬದಲಾವಣೆ

ಪಡಿತರ ಚೀಟಿದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲೂ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ವಿತರಣೆ ನಡೆಯಲಿದ್ದು, ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಪಡಿತರ ಪಡೆಯಬಹುದು.ಸರ್ವರ್ ಸಮಸ್ಯೆಯಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡಿ, ಪಡಿತರ ವಿತರಣೆಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ಆಹಾರ ಇಲಾಖೆ ಕೈಗೊಂಡಿರುವ ಈ ಕ್ರಮ ಲಕ್ಷಾಂತರ ಪಡಿತರ ಚೀಟಿದಾರರಿಗೆ ನೆರವಾಗಲಿದೆ.

BIG NEWS: Good news for state ration card holders: Fingerprint exemption due to server issue
Share. Facebook Twitter LinkedIn WhatsApp Email

Related Posts

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

1 Min Read

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

1 Min Read

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

1 Min Read
Recent News

ಭಾರತದ ಮೇಲೆ ನಿರಂತರ ನಿಗಾ: 16 ತಿಂಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದ ಪಾಕಿಸ್ತಾನ

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

State News
KARNATAKA

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಎರಡು…

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.