Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಧಾರ್ ಕಾರ್ಡ್ ಕಳೆದುಹೋಗಿದೆಯೇ?: ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್‌ನಲ್ಲೇ ಸುಲಭವಾಗಿ ಮರಳಿ ಪಡೆಯಲು ಇಲ್ಲಿದೆ ಸರಳ ಹಂತಗಳು!

ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ

‘ಮಾರುಕಟ್ಟೆ ಪಾಲನ್ನು ಅಸ್ತ್ರವಾಗಿಸಬೇಡಿ’; ಮಾರ್ಕೋ ರೂಬಿಯೊ ಎದುರೇ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ
KARNATAKA

ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಜಗತ್ತಿನಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ ಹಲವು ಕ್ರಾಂತಿ ನಡೆದಿದೆ. ಆದರೆ ಸರ್ವರ ಸಮಾನತೆಗಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಮೊದಲಿಗೆ ಕ್ರಾಂತಿ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ವೀರಶೈವ ಲಿಂಗಾಯತ ಮಹಾಸಭಾದ ಬೊಮ್ಮನಹಳ್ಳಿ ವಿಧಾನಸಭಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೇಣಿರಹಿತ, ಲಿಂಗಭೇದರಹಿತ, ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಾದಿ ಪ್ರಮಥರು ಕಲ್ಯಾಣ ಕ್ರಾಂತಿಯನ್ನೇ ಮಾಡಿದರು ಎಂದರು.

ಶರಣರು ಸಕಲ ಜೀವಾತ್ಮರಿಕೆ ಲೇಸನ್ನೇ ಬಯಸಿದರು. ಜಾತಿಯತೆ, ಮೇಲು ಕೀಳು ಎಂಬ ಭಾವನೆ, ಅಸ್ಪೃಶ್ಯತೆ, ಕಂದಾಚಾರ, ಮೌಢ್ಯ ತುಂಬಿದ್ದ ಸಮಾಜದಲ್ಲಿ ವೈಚಾರಿಕ ಮನೋಭಾವ ಮೂಡಿಸಲು, ಸೋದರತ್ವ, ಸಹಬಾಳ್ವೆಯ ಭವ್ಯ, ದಿವ್ಯ ಸಮಾಜ ಕಟ್ಟಲು ಯತ್ನಿಸಿದರು ಎಂದರು.

ಮಾನವಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರೇಣುಕಾದಿ ಆಚಾರ್ಯರು ಪ್ರತಿಪಾದಿಸಿದರೆ, ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮೆಲ್ಲರಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜೋದ್ದಾರ ಸಾಧ್ಯ ಎಂದರು.

ಯುವಜನರು ಯಾವುದೇ ಸಮಾಜದ ಬೆನ್ನೆಲುಬು. ಇಂದು ಯುವಜನರು ದಾರಿ ತಪ್ಪುತ್ತಿದ್ದು, ದುಶ್ಚಟಗಳ, ದುರ್ವ್ಯಸನಗಳ ದಾಸರಾಗುತ್ತಿದ್ದು, ದುರ್ಗುಣಗಳಿಗೆ ಬಲಿಯಾಗುತ್ತಿದ್ದಾರೆ. ಮಾತೆಯರು, ತಮ್ಮ ಮಕ್ಕಳನ್ನು ಸರಿದಾರಿಗೆ ತರಲು ಶ್ರಮಿಸಬೇಕು. ಧರ್ಮದ ಉಳಿವಿನಲ್ಲಿ ಮಾತೆಯರ ಪಾತ್ರ ಮಹತ್ವದ್ದೆಂದರು.

ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತವೆ. ಯುವಜನರನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿ ಆಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಇಂದು ಜಗತ್ತಿನಲ್ಲಿ ಹಿಂಸೆ, ಅತ್ಯಾಚಾರ, ದೌರ್ಜನ್ಯ, ಧ್ವೇಷ ಹೆಚ್ಚುತ್ತಿದೆ ಹೆಚ್ಚುತ್ತಿದೆ. ಇಂದು ಜಗತ್ತಿಗೆ ನೆಮ್ಮದಿ, ಶಾಂತಿ ಬೇಕಾಗಿದೆ. ನಾವು ಈ ಹಂತದಲ್ಲಿ ವಿಭಜನೆಯ ಹಾದಿ ತೊರೆದು ಏಕತೆಯ ಮಾರ್ಗದಲ್ಲಿ ನಡೆಯಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ರಂಬಾಪುರಿಯ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಸಿದ್ದರಬೆಟ್ಟದ ಶ್ರೀ ಬೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಭಾದ ಪಾಲಿಕಾ ಘಟಕದ ಅಧ್ಯಕ್ಷ ಬಿಡದಿ ನವೀನ್, ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.

Share. Facebook Twitter LinkedIn WhatsApp Email

Related Posts

Rain In Karnataka: ಜೂನ್.1ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ: ಉತ್ತರ ಕರ್ನಾಟಕದಲ್ಲಿ 3 ದಿನ ಭಾರಿ ಮಳೆ, ಆಲಿಕಲ್ಲು ಎಚ್ಚರಿಕೆ!

1 Min Read

BREAKING : ಪತಿಯ ಸ್ನೇಹಿತ ಎಂದು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ!

2 Mins Read

ನಕಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ: 8 ವರ್ಷಗಳ ಬಳಿಕ ಕದೀಮನ ಕೃತ್ಯ ಬಯಲು, ಎಫ್‌ಐಆರ್ ದಾಖಲು!

2 Mins Read
Recent News

ಆಧಾರ್ ಕಾರ್ಡ್ ಕಳೆದುಹೋಗಿದೆಯೇ?: ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್‌ನಲ್ಲೇ ಸುಲಭವಾಗಿ ಮರಳಿ ಪಡೆಯಲು ಇಲ್ಲಿದೆ ಸರಳ ಹಂತಗಳು!

ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ

‘ಮಾರುಕಟ್ಟೆ ಪಾಲನ್ನು ಅಸ್ತ್ರವಾಗಿಸಬೇಡಿ’; ಮಾರ್ಕೋ ರೂಬಿಯೊ ಎದುರೇ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ!

OpenAI ಆಫರ್: ಎಐ ನಿಯಂತ್ರಿಸುವ ಹುದ್ದೆಗೆ ವಾರ್ಷಿಕ ₹3.7 ಕೋಟಿ ಪ್ಯಾಕೇಜ್!

State News
KARNATAKA

ಧರ್ಮ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಮಹತ್ವದ್ದು:ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಜಗತ್ತಿನಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ ಹಲವು ಕ್ರಾಂತಿ ನಡೆದಿದೆ. ಆದರೆ ಸರ್ವರ ಸಮಾನತೆಗಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಮೊದಲಿಗೆ ಕ್ರಾಂತಿ…

Rain In Karnataka: ಜೂನ್.1ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ: ಉತ್ತರ ಕರ್ನಾಟಕದಲ್ಲಿ 3 ದಿನ ಭಾರಿ ಮಳೆ, ಆಲಿಕಲ್ಲು ಎಚ್ಚರಿಕೆ!

BREAKING : ಪತಿಯ ಸ್ನೇಹಿತ ಎಂದು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ!

ನಕಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ: 8 ವರ್ಷಗಳ ಬಳಿಕ ಕದೀಮನ ಕೃತ್ಯ ಬಯಲು, ಎಫ್‌ಐಆರ್ ದಾಖಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.