Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್
KARNATAKA

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

By ವಸಂತ ಬಿ ಈಶ್ವರಗೆರೆ

ಮಂಡ್ಯ: ಸ್ಕೇಚ್ ಹಾಕಿದ್ದು ಸಾಲ ಕೊಟ್ಟವನಿಗೆ, ಆದರೆ ಕುಡಿದ ಮತ್ತಿನಲ್ಲಿ ನಡೆದ ಸಣ್ಣ ಜಗಳಕ್ಕೆ ಬಲಿಯಾಗಿದ್ದು ಮಾತ್ರ ಮತ್ಯಾರೋ ನಿರಪರಾಧಿ! ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆಯಲ್ಲಿ ಮೇ 19 ರಂದು ನಡೆದಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ಭೇದಿಸಿರುವ ಮದ್ದೂರು ಪೊಲೀಸರು ಮೂವರು ಆರೋಪಿಗಳನ್ನು ಎಡೆಮುರಿ ಕಟ್ಟಿದ್ದಾರೆ.

​ಬಂಧಿತ ಆರೋಪಿಗಳು:

​ಮದ್ದೂರು ತಾಲೂಕಿನ ಅಜ್ಜಹಳ್ಳಿ ಗ್ರಾಮದ ನಿಶಾಂತ್, ಕಾರ್ತಿಕ್ ಮತ್ತು ಗೂಳೂರುದೊಡ್ಡಿಯ ರವಿ ಬಂಧಿತ ಆರೋಪಿಗಳಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಂಡ್ಯ ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

​ಅಸಲಿ ಸ್ಕೇಚ್ ಯಾರಿಗೆ? (ಘಟನೆಯ ಹಿನ್ನೆಲೆ):

​ಆರೋಪಿ ನಿಶಾಂತ್ ಎಂಬಾತ ಅಶೋಕ್ ಎಂಬುವವರಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಸಾಲ ಕೊಟ್ಟಿದ್ದ ಅಶೋಕ್ ಹಣವನ್ನು ವಾಪಸ್ ನೀಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದನು. ಇದರಿಂದ ಆಕ್ರೋಶಗೊಂಡಿದ್ದ ನಿಶಾಂತ್, ಅಶೋಕ್‌ನನ್ನು ಹೆದರಿಸಲು ಸಂಚು ರೂಪಿಸಿ ಮಾರಕಾಸ್ತ್ರಗಳನ್ನು (ಲಾಂಗ್) ತಂದು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದನು.

​ಮೇ 19 ರಂದು ಅಶೋಕ್‌ನನ್ನು ಎದುರಿಸಲೆಂದೇ ಆರೋಪಿ ನಿಶಾಂತ್ ಹಾಗೂ ಆತನ ಸ್ನೇಹಿತರು ಕೆ. ಹೊನ್ನಲಗೆರೆಯ ದೀಪಾ ಬಾರ್‌ಗೆ ಬಂದು ಮದ್ಯಪಾನ ಮಾಡುತ್ತಾ ಅಶೋಕ್‌ಗಾಗಿ ಕಾಯುತ್ತಿದ್ದರು.

​‘ಬಾಸ್’ ಕಿರಿಕ್ ತಂದಿಟ್ಟ ಆಪತ್ತು:

​ಮದ್ಯ ಸೇವಿಸುವಾಗ ಆರೋಪಿ ನಿಶಾಂತ್ ಬಾರ್ ಕ್ಯಾಷಿಯರ್‌ನನ್ನು ಪದೇ ಪದೇ ‘ಬಾಸ್.. ಬಾಸ್..’ ಎಂದು ಕರೆಯುತ್ತಿದ್ದನು. ಈ ವೇಳೆ ಪಕ್ಕದ ಟೇಬಲ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ಸುನೀಲ್ ಹಾಗೂ ಆತನ ಸ್ನೇಹಿತರ ತಂಡಕ್ಕೆ ಇದು ಕೇಳಿಸಿದೆ. ಕುಡಿದ ಮತ್ತಿನಲ್ಲಿದ್ದ ಸುನೀಲ್, “ಯಾವ ಸೀಮೆ ಬಾಸ್ ಅವನು?” ಎಂದು ನಿಶಾಂತ್ ತಂಡವನ್ನು ಕೆಣಕಿದ್ದಾನೆ.

​ಇದರಿಂದ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ತಕ್ಷಣ ಬಾರ್‌ನಲ್ಲಿದ್ದ ಸಹಪಾಠಿಗಳು ಹಾಗೂ ಸಿಬ್ಬಂದಿ ಜಗಳ ಬಿಡಿಸಿ ಎರಡು ಗುಂಪುಗಳನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.

​ರಸ್ತೆ ಮಧ್ಯೆ ಬರ್ಬರ ಹತ್ಯೆ:

​ಬಾರ್‌ನಿಂದ ಹೊರಬಂದ ಮೇಲೂ ಇವರ ಕೋಪ ತಣ್ಣಗಾಗಿರಲಿಲ್ಲ. ರಸ್ತೆ ಮಾರ್ಗ ಮಧ್ಯದಲ್ಲಿ ಮತ್ತೊಮ್ಮೆ ಎರಡೂ ಗುಂಪುಗಳು ಮುಖಾಮುಖಿಯಾಗಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ನಿಶಾಂತ್ ಅಂಡ್ ಟೀಮ್ ಕಾರಿನಲ್ಲಿದ್ದ ಲಾಂಗ್‌ಗಳನ್ನು ತೆಗೆದುಕೊಂಡು ಸುನೀಲ್ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸಿ ಬರ್ಬರ ಮಹಾಘಾತಕವೆಸಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುನೀಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

​ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ:

ಮೃತ ಸುನೀಲ್‌ನಿಗೆ ಕೇವಲ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಕುಡಿದ ಮತ್ತಿನಲ್ಲಿ ನಡೆದ ಕ್ಷುಲ್ಲಕ ಜಗಳಕ್ಕೆ ಯುವಕನ ಪ್ರಾಣ ಹೋಗಿರುವುದು ಇಡೀ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ.

​ತನಿಖೆ ಚುರುಕುಗೊಳಿಸಿದ್ದ ಪೊಲೀಸರು:

​ಕೊಲೆ ನಡೆದ ಬಳಿಕ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಅವರು ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share. Facebook Twitter LinkedIn WhatsApp Email

Related Posts

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

1 Min Read

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

1 Min Read

BREAKING : ಕಲಬುರ್ಗಿಯಲ್ಲಿ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ : ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

2 Mins Read
Recent News

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

State News
KARNATAKA

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮಂಡ್ಯ: ಮೂರು ವರ್ಷಗಳಿಗೊಮ್ಮೆ ಬರುವ ಪವಿತ್ರ ‘ಅಧಿಕ ಮಾಸ’ದ ವಿಶೇಷ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರಸಿದ್ಧ ಶ್ರೀ ಹೊಳೆ…

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

BREAKING : ಕಲಬುರ್ಗಿಯಲ್ಲಿ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ : ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.