Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಭಾರತೀಯ ರೈಲ್ವೇ ಇಲಾಖೆಯಲ್ಲಿ 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Railway Recruitment-2026

ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!

BREAKING : ಮೋದಿ ತೆರಳುವ ರಸ್ತೆಯಲ್ಲಿ ಸ್ಪೋಟಕ ಪತ್ತೆ ಕೇಸ್ : ಪೊಲೀಸ್ ಅಧಿಕಾರಿಗಳು ಸೇರಿ 6 ಸಿಬ್ಬಂದಿ ಸಸ್ಪೆಂಡ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!
KARNATAKA

ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!

By kannadanewsnow57

ಪ್ರಸ್ತುತ ಇಂದಿನ ಜಂಜಾಟದ ಜೀವನಶೈಲಿಯಲ್ಲಿ ವಯಸ್ಸಿನ ಭೇದವಿಲ್ಲದೆ ಕಾಡುತ್ತಿರುವ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅದುವೇ ಹೈ ಬಿಪಿ (ರಕ್ತದೊತ್ತಡ). ವೈದ್ಯಕೀಯ ಲೋಕದಲ್ಲಿ ಇದನ್ನು ‘ಸೈಲೆಂಟ್ ಕಿಲ್ಲರ್’ (ಮೌನ ಹಂತಕ) ಎಂದು ಕರೆಯಲಾಗುತ್ತದೆ.

ಏಕೆಂದರೆ, ಈ ಕಾಯಿಲೆ ದೇಹದಲ್ಲಿದ್ದರೂ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಹೊರಬೀಳುವುದಿಲ್ಲ. ಆದರೆ, ಒಳಗೊಳಗೇ ಇದು ಹೃದಯಾಘಾತ (Heart Attack), ಕಿಡ್ನಿ ವೈಫಲ್ಯ ಮತ್ತು ಪಾರ್ಶ್ವವಾಯು (Paralysis) ನಂತಹ ಪ್ರಾಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್ ವರದಿಯ ಪ್ರಕಾರ, ಬಿಪಿ ಇರುವವರು ಪ್ರಾಣಾಪಾಯದಿಂದ ಪಾರಾಗಬೇಕಾದರೆ ಪ್ರಮುಖವಾಗಿ 4 ರೀತಿಯ ಆಹಾರ ಪದಾರ್ಥಗಳಿಂದ ತಕ್ಷಣವೇ ದೂರವಿರಬೇಕು.

1. ಉಪ್ಪು: ಬಿಪಿಯ ಪ್ರಧಾನ ಶತ್ರು

ರಕ್ತದೊತ್ತಡ ಹೆಚ್ಚಾಗಲು ಮುಖ್ಯ ಕಾರಣ ನಾವು ಸೇವಿಸುವ ಉಪ್ಪು. ಆಹಾರದಲ್ಲಿ ಉಪ್ಪಿನಂಶ ಹೆಚ್ಚಾದರೆ ರಕ್ತನಾಳಗಳಲ್ಲಿ ನೀರು ಶೇಖರಣಗೊಂಡು ಒತ್ತಡ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಭಾರವನ್ನು ಬೀರುತ್ತದೆ.

ಪರಿಹಾರ: ಅಡುಗೆಯಲ್ಲಿ ಉಪ್ಪನ್ನು ಕಡಿಮೆ ಮಾಡಿ. ಊಟ ಮಾಡುವಾಗ ಮೇಲೆ ಪ್ರತ್ಯೇಕವಾಗಿ ಉಪ್ಪು ಹಾಕಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಿ. ರುಚಿಗಾಗಿ ನಿಂಬೆ ರಸ ಅಥವಾ ನೈಸರ್ಗಿಕ ಮಸಾಲೆಗಳನ್ನು ಬಳಸಿ.

2. ಸಂಸ್ಕರಿಸಿದ ಮಾಂಸ (Processed Meat)

ಸಾಸೇಜ್‌ಗಳು, ಹಾಟ್ ಡಾಗ್‌ಗಳು, ಬೇಕನ್‌ನಂತಹ ಸಂರಕ್ಷಿಸಲ್ಪಟ್ಟ ಮಾಂಸಾಹಾರಿ ಪದಾರ್ಥಗಳು ಬಿಪಿ ರೋಗಿಗಳಿಗೆ ವಿಷಕ್ಕೆ ಸಮಾನ. ಇವುಗಳು ಹಾಳಾಗದಂತೆ ತಡೆಯಲು ಅತಿಯಾದ ಉಪ್ಪು ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಪರಿಹಾರ: ಚಿಕನ್, ಮಟನ್ ನಂತಹ ಮಾಂಸವನ್ನು ಅತಿಯಾಗಿ ಮಸಾಲೆ ಮತ್ತು ಎಣ್ಣೆ ಹಾಕಿ ತಿನ್ನುವ ಬದಲು ನಿಯಮಿತವಾಗಿ ಸೇವಿಸಿ. ಸಂಸ್ಕರಿಸಿದ ಮಾಂಸದ ಬದಲಿಗೆ ತಾಜಾ ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

3. ಸಾಸ್‌ಗಳು ಮತ್ತು ಉಪ್ಪಿನಕಾಯಿ

ನಮ್ಮ ದಕ್ಷಿಣ ಭಾರತೀಯ ಅಡುಗೆಯಲ್ಲಿ ಉಪ್ಪಿನಕಾಯಿಗೆ ಅವಿನಾಭಾವ ಸಂಬಂಧವಿದೆ. ಆದರೆ, ಬಿಪಿ ಇರುವವರಿಗೆ ಇದು ಅತ್ಯಂತ ಅಪಾಯಕಾರಿ. ಟೊಮೆಟೊ ಕೆಚಪ್, ಸೋಯಾ ಸಾಸ್ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿಗಳಲ್ಲಿ ಸೋಡಿಯಂ (ಉಪ್ಪು) ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಒಂದು ಸಣ್ಣ ಚಮಚ ಉಪ್ಪಿನಕಾಯಿಯಲ್ಲಿ ನೀವು ಇಡೀ ದಿನ ಸೇವಿಸಬೇಕಾದ ಉಪ್ಪಿಗಿಂತ ಎರಡರಷ್ಟು ಉಪ್ಪಿನಂಶ ಇರುತ್ತದೆ.

4. ಬೇಕರಿ ಮತ್ತು ಫಾಸ್ಟ್ ಫುಡ್

ಪಿಜ್ಜಾ, ಬರ್ಗರ್, ಕೇಕ್, ಬಿಸ್ಕತ್‌ಗಳಲ್ಲಿ ಕೇವಲ ಉಪ್ಪು ಮಾತ್ರವಲ್ಲದೆ, ಅನಾರೋಗ್ಯಕರ ಕೊಬ್ಬು (Fat) ಮತ್ತು ಸಕ್ಕರೆಯೂ ಅಧಿಕವಾಗಿರುತ್ತದೆ. ಇವು ದೇಹದ ತೂಕವನ್ನು ಶೀಘ್ರವಾಗಿ ಹೆಚ್ಚಿಸುತ್ತವೆ. ಹೆಚ್ಚಿದ ದೇಹದ ತೂಕವು ರಕ್ತದೊತ್ತಡವನ್ನು ಅಪಾಯಕಾರಿ ಮಟ್ಟಕ್ಕೆ ತಲುಪಿಸುತ್ತದೆ. ಇದರೊಂದಿಗೆ ಸೋಡಾದಂತಹ ತಂಪು ಪಾನೀಯಗಳಿಂದಲೂ ಸಂಪೂರ್ಣವಾಗಿ ದೂರವಿರಬೇಕು.

ಗಮನಿಸಿ: ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಬಿಪಿಗೆ ಮಾಗುಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ, ಆಹಾರದ ನಿಯಮಗಳನ್ನು ಪಾಲಿಸದಿದ್ದರೆ ಯಾವುದೇ ಪ್ರಯೋಜನವಿರುವುದಿಲ್ಲ. ಆದ್ದರಿಂದ ಮೇಲಿನ ಆಹಾರಗಳಿಂದ ದೂರವಿದ್ದು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಮನೆಯಲ್ಲಿ ಬೇಯಿಸಿದ ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಹೃದಯವನ್ನು ಸುರಕ್ಷಿತವಾಗಿರಿಸಿಕೊಳ್ಳಿ.

Does eating chicken and mutton increase BP? Non-vegetarians should know this!
Share. Facebook Twitter LinkedIn WhatsApp Email

Related Posts

BREAKING : ಮೋದಿ ತೆರಳುವ ರಸ್ತೆಯಲ್ಲಿ ಸ್ಪೋಟಕ ಪತ್ತೆ ಕೇಸ್ : ಪೊಲೀಸ್ ಅಧಿಕಾರಿಗಳು ಸೇರಿ 6 ಸಿಬ್ಬಂದಿ ಸಸ್ಪೆಂಡ್!

1 Min Read

BREAKING : ಬೆಂಗಳೂರಲ್ಲಿ ವೃದ್ದೆಗೆ ಡಿಜಿಟಲ್ ಅರೆಸ್ಟ್ ಮೂಲಕ 24 ಕೋಟಿ ವಂಚನೆ ಕೇಸ್ : ಐವರು ಅರೆಸ್ಟ್!

2 Mins Read

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಜೂ.1ರಿಂದ ಸೆಷನ್ಸ್ ಕೋರ್ಟಲ್ಲಿ ದರ್ಶನ್ ಕೊಲೆ ಕೇಸ್ ವಿಚಾರಣೆ

1 Min Read
Recent News

JOB ALERT : ಭಾರತೀಯ ರೈಲ್ವೇ ಇಲಾಖೆಯಲ್ಲಿ 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Railway Recruitment-2026

ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!

BREAKING : ಮೋದಿ ತೆರಳುವ ರಸ್ತೆಯಲ್ಲಿ ಸ್ಪೋಟಕ ಪತ್ತೆ ಕೇಸ್ : ಪೊಲೀಸ್ ಅಧಿಕಾರಿಗಳು ಸೇರಿ 6 ಸಿಬ್ಬಂದಿ ಸಸ್ಪೆಂಡ್!

BREAKING : ಬೆಂಗಳೂರಲ್ಲಿ ವೃದ್ದೆಗೆ ಡಿಜಿಟಲ್ ಅರೆಸ್ಟ್ ಮೂಲಕ 24 ಕೋಟಿ ವಂಚನೆ ಕೇಸ್ : ಐವರು ಅರೆಸ್ಟ್!

State News
KARNATAKA

ಚಿಕನ್, ಮಟನ್ ತಿಂದರೆ ಬಿಪಿ ಹೆಚ್ಚಾಗುತ್ತಾ..? ಮಾಂಸಾಹಾರಿಗಳು ಈ ವಿಷಯ ತಿಳಿಯಲೇಬೇಕು!

By kannadanewsnow57 KARNATAKA 2 Mins Read

ಪ್ರಸ್ತುತ ಇಂದಿನ ಜಂಜಾಟದ ಜೀವನಶೈಲಿಯಲ್ಲಿ ವಯಸ್ಸಿನ ಭೇದವಿಲ್ಲದೆ ಕಾಡುತ್ತಿರುವ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅದುವೇ ಹೈ ಬಿಪಿ…

BREAKING : ಮೋದಿ ತೆರಳುವ ರಸ್ತೆಯಲ್ಲಿ ಸ್ಪೋಟಕ ಪತ್ತೆ ಕೇಸ್ : ಪೊಲೀಸ್ ಅಧಿಕಾರಿಗಳು ಸೇರಿ 6 ಸಿಬ್ಬಂದಿ ಸಸ್ಪೆಂಡ್!

BREAKING : ಬೆಂಗಳೂರಲ್ಲಿ ವೃದ್ದೆಗೆ ಡಿಜಿಟಲ್ ಅರೆಸ್ಟ್ ಮೂಲಕ 24 ಕೋಟಿ ವಂಚನೆ ಕೇಸ್ : ಐವರು ಅರೆಸ್ಟ್!

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಜೂ.1ರಿಂದ ಸೆಷನ್ಸ್ ಕೋರ್ಟಲ್ಲಿ ದರ್ಶನ್ ಕೊಲೆ ಕೇಸ್ ವಿಚಾರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.