ಧರ್ಮಶಾಲಾ:ತಿಲಕ್ ವರ್ಮಾ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ಸತತ 5 ಪಂದ್ಯಗಳಲ್ಲಿ ಸೋತಂತಾಗಿದ್ದು, ಅವರ ಪ್ಲೇ-ಆಫ್ ಹಾದಿ ಕಠಿಣವಾಗಿದೆ. ಮುಂಬೈ ಗೆದ್ದರೂ ಸಹ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಐಪಿಎಲ್ 2026 ಅಂಕಪಟ್ಟಿ (ಮೇ 14ರ ನಂತರ):
ಸ್ಥಾನ ತಂಡ ಪಂದ್ಯ ಜಯ ಸೋಲು ಅಂಕ ನೆಟ್ ರನ್ ರೇಟ್
1 ಆರ್ಸಿಬಿ (RCB) 12 8 4 16 +1.053
2 ಗುಜರಾತ್ ಟೈಟಾನ್ಸ್ (GT) 12 8 4 16 +0.551
3 ಸನ್ ರೈಸರ್ಸ್ ಹೈದರಾಬಾದ್ (SRH) 12 7 5 14 +0.331
4 ಪಂಜಾಬ್ ಕಿಂಗ್ಸ್ (PBKS) 12 6 5 13 +0.355
5 ಚೆನ್ನೈ ಸೂಪರ್ ಕಿಂಗ್ಸ್ (CSK) 11 6 5 12 +0.185
6 ರಾಜಸ್ಥಾನ್ ರಾಯಲ್ಸ್ (RR) 11 6 5 12 +0.082
7 ಡೆಲ್ಲಿ ಕ್ಯಾಪಿಟಲ್ಸ್ (DC) 12 5 7 10 -0.993
8 ಕೋಲ್ಕತ್ತಾ ನೈಟ್ ರೈಡರ್ಸ್ (KKR) 11 4 6 9 -0.198
9 ಮುಂಬೈ ಇಂಡಿಯನ್ಸ್ (MI) 12 4 8 8 -0.504
10 ಲಕ್ನೋ ಸೂಪರ್ ಜೈಂಟ್ಸ್ (LSG) 11 3 8 6 -0.907
ವೈಯಕ್ತಿಕ ಸಾಧನೆಗಳು (ಅರೆಂಜ್ ಮತ್ತು ಪರ್ಪಲ್ ಕ್ಯಾಪ್):
ಆರೆಂಜ್ ಕ್ಯಾಪ್ (ಹೆಚ್ಚು ರನ್): ಸನ್ ರೈಸರ್ಸ್ ಹೈದರಾಬಾದ್ನ ಹೆನ್ರಿಚ್ ಕ್ಲಾಸೆನ್ 12 ಪಂದ್ಯಗಳಿಂದ 508 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಗುಜರಾತ್ನ ಸಾಯಿ ಸುದರ್ಶನ್ (501) ಮತ್ತು ಆರ್ಸಿಬಿಯ ವಿರಾಟ್ ಕೊಹ್ಲಿ (484) ನಂತರದ ಸ್ಥಾನಗಳಲ್ಲಿದ್ದಾರೆ.
ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್): ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ 22 ವಿಕೆಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಗುಜರಾತ್ನ ಕಗಿಸೊ ರಬಾಡ 21 ವಿಕೆಟ್ಗಳೊಂದಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.








