ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಮುಖ ಆರೋಪಿ ಆಗಿರುವಂತಹ ಜಗ್ಗ ಕೊಲೆಯಾದ ದಿನವೇ ಭಾರತ ಬಿಟ್ಟು ದುಬೈಗೆ ಪರಾರಿಯಾಗಿದ್ದ. ಇದೀಗ ಸಿಐಡಿ ಅಧಿಕಾರಿಗಳು ಆರೋಪಿ ಜಗ್ಗನಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಬೈಗೆ ಪರಾರಿಯಾಗಿರುವ ಜಗದೀಶ್ ಅಲಿಯಾಸ್ ಜಗ್ಗನಿಗೆ ಸಿಐಡಿ ಪೋಲೀಸರು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ. ಇಂಟರ್ಫೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದು, ಸಿಐಡಿ ಪೊಲೀಸರು ಇದೀಗ ಆತನ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ ಎನ್ನುವುದರ ಕುರಿತು ಮಾಹಿತಿ ಸಿಗಲಿದೆ.
ಆದರೆ ಇದೀಗ CID ಅಧಿಕಾರಿಗಳಿಗೆ ಬಂದಿರುವ ಮಾಹಿತಿ ಪ್ರಕಾರ ಆರೋಪಿ ಜಗ್ಗ ದುಬೈ ನಿಂದಲೂ ಪರಾರಿಯಾಗಿದ್ದಾನೆ ಎನ್ನಲಾಗಿದೆ. ದುಬೈ ಏರ್ಪೋರ್ಟ್ ಎಂಟ್ರಿ ಆಗಿದ್ದರ ಬಗ್ಗೆ ಸಿಐಡಿ ಗೆ ಮಾಹಿತಿ ತಿಳಿದು ಬಂದಿದೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೂ ಮೊದಲೇ ಜಗ್ಗ ದುಬೈ ಏರ್ಪೋರ್ಟಿಗೆ ಎಂಟ್ರಿ ಆಗಿದ್ದ ಆತ ಭಾರತಕ್ಕೆ ಬಂದಿದ್ದಾನ ಅಥವಾ ಬೇರೆ ದೇಶಕ್ಕೆ ಪರಾರಿಯಾಗಿದ್ದಾನೆ ಎನ್ನುವುದರ ಕುರಿತು ಮಾಹಿತಿ ಕಲೆ ಹಾಕುತ್ತಿದೆ.
ಇದೀಗ ಜಗದೀಶ್ ವಿರುದ್ಧ ಕ್ಲೋಸ್ ಆಗಿದ್ದ ರೌಡಿಶೀಟರ್ ಓಪನ್ ಮಾಡಲಾಗುತ್ತದೆ. ಪೂರ್ವ ವಿಭಾಗದ ಪೊಲೀಸರಿಂದ ರೌಡಿಶೀಟರ್ ರಿ ಓಪನ್ ಆಗುತ್ತೆ ಹೆಣ್ಣೂರಿನಲ್ಲಿ ರೌಡಿ ಮತ್ತು ಭಾರತೀಯ ನಗರದಲ್ಲಿ ಬಿ ರೌಡಿ ಪಟ್ಟಿ ಎಂದು ಇದೀಗ ಜಗ್ಗನ ವಿರುದ್ಧ ರೌಡಿಶೀಟರ್ ಹರಿ ಓಪನ್ ಆಗಲಿದೆ ಎಂದು ತಿಳಿದುಬಂದಿದೆ.