ಶುಭ ಶುಕ್ರವಾರದ ವರಮಹಾಲಕ್ಷ್ಮಿ ಶಾಸ್ತ್ರೋಕ್ತ ಸಂಪೂರ್ಣ ಪೂಜೆ ಮಾಡುವ ವಿಧಾನವಾಗಿದೆ. ಈ ರೀತಿ ಪೂಜೆ ಮಾಡುವುದರಿಂದ ಜೀವನಪರ್ಯಂತ ವರಮಹಾಲಕ್ಷ್ಮಿ ಮನೆಯಲ್ಲಿ ನೆಲೆಸಿ ಆಶೀರ್ವದಿಸುವಳು
ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:
ರಂಗೋಲಿ , ಮಣೆ / ಮಂಟಪ
ಲಕ್ಷ್ಮೀ ವಿಗ್ರಹ ಅಥವಾ ಕಲಶ (ದೇವರ ಭಾವಚಿತ್ರ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ,
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ –
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ – ಹಣ್ಣು ಕಾಯಿ ಫಲವಸ್ತು
(ಪಾಯಸ,ಹುಗ್ಗಿ, ಅನ್ನ, ಕೋಸಂಬರಿ, ನೀರಲ್ಲಿ ನೆನೆ ಹಾಕಿದ ಕಡಲೆ ), ಇತ್ಯಾದಿ
ಯೋಗ್ಯತಾನುಸಾರ
ಕರ್ಪೂರ, ಮಂಗಳಾರತಿ ಬತ್ತಿ ಆರತಿ ತಟ್ಟೆ, ಹೂಬತ್ತಿ, ಇತ್ಯಾದಿ ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು (ಮುಖ್ಯವಾಗಿ ಅಲಂಕಾರ
ಮಾಡುವುದಕ್ಕೆ ಮನೆಯಲ್ಲಿನ ಹೂ ಮತ್ತು ಪತ್ರೆ ಅತ್ಯಂತ ಶ್ರೇಷ್ಟ.)
ಅವರವರ ಯೋಗ್ಯತೆ ಗೆ ಅನುಸಾರ
ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ
ಅವಲಂಭಿಸಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
● ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.
● ವ್ರತ ಮಾಡುವವರು ಪೂಜೆ
ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ
ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ
ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ
ಸ್ಥಾಪಿಸಬೇಕು.
● ಒಂದು ಕಲಶದಲ್ಲಿ
ನೀರು ಹಾಕಿ, ಜೊತೆಗೆ ಅರಿಶಿನ ಕುಂಕುಮ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ ಹಾಕಿ,ಕಳಶದ ಬಾಯಿಗೆ ಮಾವಿನ ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ
ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ
ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ
ಜೋಡಿಸಬಹುದು) ಈ ಕಳಶವನ್ನು ಅಕ್ಕಿ ಹರಡಿರುವ
ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ
ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ
ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ
ಅಲಂಕಾರ ಮಾಡಬಹುದು. ಈ ಕಲಶಕ್ಕೆ
ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ,
ಕಲಶವನ್ನು ಪೂಜೆ ಮಾಡಬೇಕು.
ಕಲಶದ ಎದುರಿನಲ್ಲಿ ನಾಣ್ಯ ಮತ್ತು ಹಣವನ್ನು ಚಿನ್ನ ಬೆಳ್ಳಿ ಇತ್ಯಾದಿ ಇಟ್ಟು ಪೂಜೆ ಮಾಡಬಹುದು
● ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು.
ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ
ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ
ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ
ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ
ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬಹುದು
ವರ್ತಮಾನೇ ವ್ಯಾವಹಾರಿಕೇ ಶುಭ ಕೃತ್ ನಾಮ
ಸಂವತ್ಸರೇ, ದಕ್ಷಿಣಾಯನೇ ,.
ಶರತ್ ಋತು ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ,
….. ಅಮಾವಾಸ್ಯೆಯಾಂ ತಿಥಿ ಇಂದೂ ವಾಸರ (ಸೋಮವಾರ)
ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಧನ ಧನ್ಯ ಸಂಪದಾದಿ ಅಭಿವೃದ್ಧ್ಯಾರ್ಥಂ
ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ ಶ್ರೀ ….ಧನ ಧಾನ್ಯ ಲಕ್ಷ್ಮೀ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.
ಧ್ಯಾನ
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕಪೂಜಿತೆ |
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ”…||
(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳಬಹುದು)
● ಆವಾಹನೆ
(ಅಂದರೆ ಆಹ್ವಾನ. ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು.) ಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ
● ಆಸನ
ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು.ಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ
● ಪಾದ್ಯ
ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)
● ಅರ್ಘ್ಯ
ಕೈ ತೊಳೆದುಕೊಳ್ಳುವುದಕ್ಕೆ ನೀರುಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ
(ಹರಿವಾಣದಲ್ಲಿ ನೀರು ಬಿಡುವುದು)
● ಆಚಮನ
ಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ
● ಸ್ನಾನ
(ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ
● ಗೆಜ್ಜೆವಸ್ತ್ರ
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಸಮರ್ಪಿಸುವುದು . ಜೊತೆಗೆ ( ಜನಿವಾರ), ಆಭರಣವನ್ನು (ಬಳೆ- ಬಿಚ್ಚೋಲೆ )ಸಮರ್ಪಿಸುವುದು. ಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ
● ಹರಿದ್ರ, ಕುಂಕುಮ
ಗಂಧ, ಅಕ್ಷತ – ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ, ಗಂಧ, ಅಕ್ಷತಾಂ – ಸಮರ್ಪಯಾಮಿ
● ಪುಷ್ಪ ಮಾಲ
ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ
● ಅರ್ಚನೆ/ಅಷ್ಟೋತ್ತರ
ನೂರೆಂಟು ನಾಮಗಳಿಂದ
ದೇವರನ್ನು ಸ್ಮರಣೆ ಮಾಡುವುದು. ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ
● ಧೂಪ
ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ
● ದೀಪ ಬೆಳಗುವುದು
ದೀಪ ಸಮರ್ಪಣೆ ಮಾಡುವುದು ಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ
● ನೈವೇದ್ಯ, ತಾಂಬೂಲ
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.ಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ
● ನೀರಾಜನ ಮಂಗಳಾರತಿ
ಕರ್ಪುರದಿಂದ ಮಂಗಳಾರತಿ ಮಾಡುವುದು.ಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ
● ನಮಸ್ಕಾರ
ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು. ಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
● ಪ್ರಾರ್ಥನೆ
ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡುವುದು.
||ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರಯಂಬಕೆ ಗೌರಿ ನಾರಾಯಣೀ ನಮೋಸ್ತುತೆ||
ಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ
ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.