ಕೋಲಾರ : ಕೋಲಾರದಲ್ಲಿ ವಿದ್ಯಾರ್ಥಿಯ ಮೇಲೆ ಕ್ರೌರ್ಯ ಮೆರೆದಿದ್ದು, ದೆವ್ವ ಇದೆ ಎಂದು ತಮಾಷೆ ಮಾಡಿದ್ದಕ್ಕೆ 6ನೇ ತರಗತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಬಾಸುಂಡೆ ಬರುವಂತೆ ಹಾಸ್ಟೆಲ್ ವಾರ್ಡನ್ ಹಲ್ಲೆ ಮಾಡಿದ್ದಾನೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯ ಮೇಲೆ ವಾರ್ಡನ್ ಈ ರೀತಿ ಕ್ರೌರ್ಯ ಮೆರೆದಿದ್ದಾನೆ.
ಅನಂತಪುರ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿಯ ಮೇಲೆ ವಸತಿ ಶಾಲೆಯಲ್ಲಿ ದೆವ್ವ ಇದೆ ಎಂದು ತಮಾಷೆ ಮಾಡುತ್ತಿದ್ದ. ತಮಾಷೆ ಮಾಡಿದ್ದಕ್ಕೆ ವಾರ್ಡನ್ ಹಲ್ಲೆ ಮಾಡಿದ್ದಾನೆ. ಮುಳಬಾಗಿಲು ತಾಲೂಕು ಬಾಳಸಂದ್ರ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯ ಮೇಲೆ ವಾರ್ಡನ್ ಮನಬಂದಂತೆ ಥಳಿಸಿದ್ದಾನೆ.
ಕೋಲು ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾನೆ. ಇತ್ತೀಚಿಗೆ ವಿದ್ಯಾರ್ಥಿ ತನ್ನ ತಂದೆಯನ್ನು ಕೂಡ ಕಳೆದುಕೊಂಡಿದ್ದ. ದೆವ್ವ ಇದೆ ಎಂದು ತಮಾಷೆ ಮಾಡುತ್ತಿದ್ದ. ವಿದ್ಯಾರ್ಥಿ ತಮಾಷೆ ಮಾಡುತ್ತಿದ್ದ ಈ ವಿಚಾರವನ್ನು ಉಳಿದ ವಿದ್ಯಾರ್ಥಿಗಳು ವಾರ್ಡನಿಗೆ ತಿಳಿಸಿದ್ದಾರೆ. ಹಾಗಾಗಿ ವಾರ್ಡನ್ ವಿದ್ಯಾರ್ಥಿಯ ಮೇಲೆ ಬಾಸುಂಡೆ ಬರುವ ಹಾಗೆ ಹಲ್ಲೆ ಮಾಡಿದ್ದಾರೆ.