ಹಾಸನ : ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಕೊಲೆಗೈದ ಬಳಿಕ ಚಂದ್ರಕಲಾ (27) ರನ್ನು ಪತಿ ಆನಂದ್ ನೇಣು ಬಿಗಿದ ಆರೋಪ ಕೇಳಿ ಬಂದಿದೆ. ವರದಕ್ಷಣೆಗಾಗಿ ಪತಿ ಆನಂದ (35) ಕೊಲೆ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೆಗ್ಗಡಿಹಳ್ಳಿ ನಿವಾಸಿಯಾಗಿರುವ ಚಂದ್ರಕಲಾ ಏಳು ವರ್ಷಗಳ ಹಿಂದೆ ಆನಂದ ಜೊತೆಗೆ ವಿವಾಹವಾಗಿದ್ದರು. ಸಾಕಷ್ಟು ಸಾಲ ಮಾಡಿದ್ದ ಆನಂದ್ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಚಂದ್ರಕಲಾಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರಕ್ಕೆ ಚಂದ್ರಕಲಾ ಮೇಲೆ ಹಲವು ಸಲ ಆನಂದ ಹಲ್ಲೆ ಮಾಡಿದ್ದಾನೆ.ನಿನ್ನೆ ರಾತ್ರಿ ಹಲ್ಲೆ ನಡೆಸಿ ಕೊಲೆ ಮಾಡಿ ನೇಣು ಬಿಗಿದಿರುವ ಆರೋಪ ಕೇಳಿ ಬಂದಿದೆ. ಪತ್ನಿ ಚಂದ್ರಕಲಾಳನ್ನು ಕೊಂದ ಬಳಿಕ ಪತಿ ಆನಂದ್ ಪರಾರಿಯಾಗಿದ್ದಾನೆ.