ಬೀದರ್ : ಬೀದರ್ನಲ್ಲಿರುವ ಐತಿಹಾಸಿಕ ಗುರು ದ್ವಾರಕ್ಕೆ ನಿನ್ನೆ ತಾನೇ ಕಿಡಿಗೇಡಿಗಳು ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದರು. ಇದೀಗ ಇಂದು ಬೀದರ್ ನ ಐತಿಹಾಸಿಕ ಗುರುದ್ವಾರಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ತಕ್ಷಣ ಗುರುದ್ವಾರದಲ್ಲಿ ಮತ್ತು ಶ್ವಾನದಳ ಹಾಗು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೀದರ್ ನ ಗುರುದ್ವಾರಕ್ಕೆ ಎಸ್‌ಪಿ ಪ್ರದೀಪ್ ಭೇಟಿ ನೀಡಿ ಇಂದು ಮತ್ತೊಮ್ಮೆ ಪರಿಶೀಲನೆ ನಡೆಸಿದರು. ನಿನ್ನೆಯೂ ಸಹ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು.