ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಇದೀಗ ಮಳೆಯಿಂದ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ.ಓರ್ವ ಮಹಿಳೆ ಕಾರಿನಲ್ಲಿ ಸಿಲುಕಿದ್ದಾರೆ. ಕಾರಿನ ಮೇಲೆ ಬೃಹತ್ ಗಾತ್ರದ ಮರ ಒಂದು ಬಿದ್ದಿದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪಿಕಳೆ ಆಸ್ಪತ್ರೆಯ ಎದರು ಈ ಒಂದು ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಮತ್ತೋರ್ವ ಗರ್ಭಿಣಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಕಾರಿನಲ್ಲಿ ಮತ್ತೊಬ್ಬ ಮಹಿಳೆ ಸಿಲುಕಿದ್ದು, ಮಹಿಳೆ ರಕ್ಷಣೆಗೆ ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದಾರೆ. ಗರ್ಭಿಣಿ ಸೊಸೆಯ ಜೊತೆಗೆ ಅತ್ತೆ ಲಕ್ಷ್ಮಿ ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ಬಳಿ ಕಾರಿನಿಂದ ಗರ್ಭಿಣಿ ಸುನೀತಾ ಕಾರಿನಿಂದ ಇಳಿದಿದಾರೆ. ಅತ್ತೆ ಲಕ್ಷ್ಮೀ ಕಾರಿನ ಡೋರ್ ತೆಗೆದು ಇಳಿಯುವಷ್ಟರಲ್ಲಿ ಮರ ಕಾರಿನ ಮೇಲೆ ಬಿದ್ದಿದೆ. ಸುಮಾರು ಅರ್ಧ ಗಂಟೆಯ ಪ್ರಯತ್ನದ ಬಳಿಕ ಲಕ್ಷ್ಮಿಯನ್ನು ಸ್ಥಳಿಯರು ಹೊರಗಡೆ ತೆಗೆದಿದ್ದಾರೆ ಗಂಭೀರವಾಗಿ ಕೈಗೊಂಡ ಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀ ಸಾವನ್ನಪ್ಪಿದ್ದಾರೆ. ಮರ ಬಿದ್ದು ಎಂಟು ತಿಂಗಳ ಗರ್ಭಿಣಿ ಸುನಿತಾಗು ಗಾಯಗಳಾಗಿದೆ.