ಮೈಸೂರು : ನೀನೇ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮೊದಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಷಣ ಮಾಡಿ ತಕ್ಷಣ ಕಾರ್ಯಕ್ರಮದಿಂದ ತೆರಳಿದ್ದರು.
ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರನ್ನು ತೆಗೆದುಕೊಳ್ಳಲಿಲ್ಲ ಎನ್ನುವುದು ಬಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ.ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ದೆಹಲಿಗೆ ಹೋಗಬೇಕು ಎಂದು ಹೇಳಿ ಅವರು ವೇದಿಕೆಯಿಂದ ತೆರಳಿದ್ದರು. ನಮ್ಮಿಬ್ಬರ ನಡುವೆ ಒಡಕುಂಟು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯವರು ಇದನ್ನ ಲಾಭ ಮಾಡಿಕೊಳ್ಳುವ ಭ್ರಮೆಯಲ್ಲಿದ್ದಾರೆ. ಬಿಜೆಪಿಯವರು ಹೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಅವರು ಹೇಳುವುದು ಬರಿ ಸುಳ್ಳು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಬೇಕು ಅಂತ ಅವರು ಬೇಗ ಹೋದರು ಅಷ್ಟೇ ಹಾಗಾಗಿ ಅವರ ಹೆಸರು ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ನಾನು ನಿನ್ನೆ ಸಿಎಂ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಹೋಗುವ ವಿಚಾರವಾಗಿ ಹೇಳಿ ಮಧ್ಯದಲ್ಲಿಯೇ ತೆರಳಿದ್ದೇನೆ. ಎಮರ್ಜೆನ್ಸಿ ಪ್ರೋಗ್ರಾಮ್ ಇತ್ತು ಅದಕ್ಕಾಗಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬೇಗ ಹೋದೆ. ಸಮಯ ಫಿಕ್ಸ್ ಆಗಿದ್ದರಿಂದ ಬೇಗ ಭಾಷಣ ಮಾಡಿ ನಾನು ವೇದಿಕೆಯಿಂದ ತೆರಳಿದ್ದೇನೆ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ನನ್ನ ಎಸ್ಕಾರ್ಟ್ ಕಾರು ಆಕ್ಸಿಡೆಂಟ್ ಆಯ್ತು. ಸದ್ಯ ಯಾರಿಗೂ ಏನು ಅಪಾಯ ಆಗಿಲ್ಲ. 7:30ಕ್ಕೆ ತೆರಳಿ ಮಧ್ಯರಾತ್ರಿ ವಾಪಾಸ್ ಬಂದಿದ್ದೇನೆ. ಬೆಳಿಗ್ಗೆ ಇಲ್ಲಿಗೆ ಬಂದು ಬಾಗಿನ ಅರ್ಪಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.