ಬೀದರ್ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಆರೋಪ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಸಂತ್ರಸ್ತೆ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಇದೀಗ ಬೀದರ್ ಎಸ್ಪಿ ಕಚೇರಿಗೆ ಸಂತ್ರಸ್ತ ಯುವತಿ ಆಗಮಿಸಿದ್ದು, ಎಸ್ ಪಿ ಅವರನ್ನು ಭೇಟಿಯಾದ ಬಳಿಕ ಎಸ್‌ಪಿಗೆ ಪ್ರತೀಕ್ ಚೌವ್ಹಾಣ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹೌದು ಪ್ರಭು ಚೌಹಾಣ್ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ ಚೌಹಾನ್ ಸಂತ್ರಸ್ತ ಯುವತಿ ಇದೀಗ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಮಾಜಿ ಸಚಿವನ ವಿರುದ್ಧ ಎಸ್ಪಿಗೆ ಇಂದು ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಮದುವೆಯಾಗುವುದಾಗಿ ನಂಬಿಸಿ ಮೋಸ ಹಾಗೂ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಹಾಗಾಗಿ ಸಾಧ್ಯತೆ ಇದೆ. ಎಸ್ ಪಿ ಪ್ರದೀಪ್ ಗುಂಟೆಗೆ ಯುವತಿ ದೂರು ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.