ಅಹ್ಮದಾಬಾದ್ : ಅಹ್ಮದಾಬಾದ ನಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದಂಪತಿ, ಇಬ್ಬರು ಹೆಣ್ಣು ಮಕ್ಕಳು, ಹಾಗೂ ಓರ್ವ ಪುತ್ರ ಆತ್ಮಹತ್ಯೆ ಶರಣಾಗಿದ್ದಾರೆ.
ಪತಿ ವಿಫುಲ್ ಭಾಯ್, ಪತ್ನಿ ಸೋನಾಲ್ ಬೆನ್, 8 ವರ್ಷದ ಪುತ್ರಿ ಸಿಮ್ರಾನ್, 11 ವರ್ಷದ ಮಯೂರ್ ಹಾಗು 5 ವರ್ಷದ ಪುತ್ರ ಪ್ರಿನ್ಸ್ ವಿಫುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಹಮದಾಬಾದ್ನ ಭಗವದರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಟೋ ಡ್ರೈವರ್ ಆಗಿ ವಿಫುಲ್ ಬಾಯ್ ಜೀವನ ನಡೆಸುತ್ತಿದ್ದರು. ಬಾಡಿಗೆ ಮನೆಯಲ್ಲಿ ಐವರು ಆತ್ಮಹತ್ಯೆ ಶರಣಾಗಿದ್ದಾರೆ. ಕುಟುಂಬ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಅಹಮದಾಬಾದ್ ಪೊಲೀಸರಿಂದ ತನಿಖೆ ಮುಂದುವರೆದಿದೆ