ಬೆಂಗಳೂರು : ಇತ್ತೀಚಿಗೆ ಈ ಆನ್ಲೈನ್ ಲವ್ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನಲ್ಲಿ ಪರಿಚಯವಾಗಿ ಎರಡೇ ದಿನಕ್ಕೆ ಲವ್ ಆಗಿ, ಒಂದೇ ವಾರದಲ್ಲಿ ಮದುವೆಯಾಗಿ, ಮುಂದೆ ಒಂದೇ ಒಂದು ತಿಂಗಳಲ್ಲಿ ಡೈವೋರ್ಸ್ ಹಂತಕ್ಕೆ ಈ ಒಂದು ಪ್ರಕರಣಗಳು ಬಂದು ನಿಲ್ಲುತ್ತಿವೆ. ಇದೀಗ ಅಂತದ್ದೇ ಘಟನೆ ಬೆಂಗಳೂರಿನ ಎಚ್ಎಎಲ್ ನಲ್ಲಿ ನಡೆದಿದ್ದು, ಇನ್ಸ್ಟಾಗ್ರಾಮ್ ನಲ್ಲಿ ತಮಿಳುನಾಡು ಮೂಲದ ವ್ಯಕ್ತಿ ಒಬ್ಬನಿಗೆ ಬೆಂಗಳೂರಿನಲ್ಲಿರುವ ಮಹಿಳೆ ಜೊತೆಯ ಪರಿಚಯವಾಗಿ ಈ ವೇಳೆ ಆತ ಮಹಿಳೆಯನ್ನು ಒನ್ ಸೈಡ್ ಲವ್ ಮಾಡಲು ಆರಂಭಿಸಿದ್ದಾನೆ.
ಹೌದು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆ ಜೊತೆ ಒನ್ ವೇ ಲವ್ ನಡೆದಿರುವ ಘಟನೆ ಬೆಂಗಳೂರಲ್ಲಿ ನಡೆದಿದ್ದು, ಮಾತುಕತೆಗೆ ಕರೆಸಿದ ಮಹಿಳೆಯ ಸಂಬಂಧಿಕನ ಕತ್ತು ಕೊಯ್ದು ಕೊಲೆಗೆ ಯತ್ನಿಸಲಾಗಿದೆ. ಜುಲೈ 17 ರಂದು ಬೆಂಗಳೂರಿನ ಎಚ್ಎಎಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ತಮಿಳುನಾಡು ಮೂಲದ ಕಾರ್ತಿಕ ಇನ್ಸ್ಟಾಗ್ರಾಮ್ ನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಸೇಲ್ವ ಕಾರ್ತಿಕ್ ಮಹಿಳೆಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ.
ಪ್ರೀತಿ ಮಾಡುವಂತೆ ಮಹಿಳೆಗೆ ಆರೋಪಿ ಸೇಲ್ವಾ ಕಾರ್ತಿಕ್ ಪೀಡಿಸುತ್ತಿದ್ದ. ಈ ವಿಚಾರವನ್ನು ಮಹಿಳೆ ಗಂಡನಿಗೆ ಹೇಳದೆ ತನ್ನ ತಂದೆಗೆ ಹೇಳಿದ್ದಾಳೆ. ಮಾತುಕತೆಗೆ ಎಂದು ಬೆಂಗಳೂರಿನ ಎಚ್ಎಎಲ್ ಗೆ ಕಾರ್ತಿಕ್ ನನ್ನು ಮಹಿಳೆಯ ತಂದೆ ಕರೆಸಿದ್ದಾರೆ. ಮಹಿಳೆಯ ತಂದೆ ತಮ್ಮನ ಮಗ ಪ್ರಶಾಂತ ಜೊತೆಗೆ ಮಹಿಳೆ ಬೈಕ್ ನಲ್ಲಿ ಹೋಗಿದ್ದಾಳೆ. ಬೈಕ್ ನಲ್ಲಿ ಸೇಲ್ವ ಕಾರ್ತಿಕ್ ನನ್ನು ಹಿಂದೆ ಕೂರಿಸಿಕೊಂಡು ಹೋಗಿದ್ದರು. ಈ ವೇಳೆ ಕಾರ್ತಿಕ್ ಪ್ರಶಾಂತನ ಕುತ್ತಿಗೆ ಕೊಯ್ದಿದ್ದಾನೆ. ತಕ್ಷಣ ಪ್ರಶಾಂತ್ ಅನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಸೇಲ್ಬ ಕಾರ್ತಿಕ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.