ರಾಯಚೂರು : ಕಳೆದ ಕೆಲವು ದಿನಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಸರ್ಜಾಪುರ ಸೇತುವೆಯ ಮೇಲಿಂದ ಪತ್ನಿ ನನ್ನನ್ನು ತಳ್ಳಿ ಕೊಳೆಗೆ ಎನಿಸಿದ್ದಾಳೆ ಎಂದು ತಾತಪ್ಪ ಎಂಬ ಯುವಕ ಪತ್ನಿಯ ವಿರುದ್ಧ ಗಂಭೀರವಾಗಿ ಆರೋಪಿಸಿದ್ದ ಇದೀಗ, ಸೇತುವೆ ಮೇಲಿಂದ ಪತಿಯನ್ನು ತಳ್ಳಿದ ಪ್ರಕರಣಕ್ಕೆ ಇದೀಗ ಟ್ವೆಸ್ಟ್ ಸಿಕ್ಕಿದ್ದು, ಅಪ್ರಾಪ್ತ ಬಾಲಕಿಯ ಮದುವೆಯ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ನೀರಿನಿಂದ ಬಚಾವಾಗಿ ಬಂದವನಿಗೆ ಇದೀಗ ಕೇಸ್ ಸಂಕಷ್ಟ ಶುರುವಾಗಿದ್ದು, ಅಪ್ರಾಪ್ತೆಯನ್ನು ಮದುವೆಯಾಗಿದ್ದ ತಾತಪ್ಪನಿಗೆ ಸಂಕಷ್ಟ ಶುರುವಾಗಿದೆ. ತಾತಪ್ಪ ಎಂಬ ವ್ಯಕ್ತಿಯನ್ನು ಆತನ ಪತ್ನಿ ಸೇತುವೆಯ ಮೇಲಿಂದ ತಳ್ಳಿ ಕೊಲೆಗೆ ಯತ್ನಿಸಿದ್ದಾಳೆಎಂದು ತಾತಪ್ಪ ಗಂಭೀರವಾಗಿ ಆರೋಪಿಸಿದ್ದ. ಇದೀಗ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕೇಸ್ ಭೀತಿ ಶುರುವಾಗಿದೆ.
ಪತ್ನಿಯ ಮದುವೆಯಾಗಿದ್ದರ ಕುರಿತು ದಾಖಲೆ ಕೊಡುವಂತೆ ಡೆಡ್ ಲೈನ್ ಕೊಡಲಾಗಿದೆ. ಎರಡು ದಿನ ಕಾಲಾವಕಾಶ ಕೇಳಿದ್ದಾರೆ ತಾತಪ್ಪನ ಕುಟುಂಬಸ್ಥರು. ದಾಖಲೆಗಳನ್ನು ನೀಡದಿದ್ದರೆ ನಾಳೆ ಎಫ್ಐಆರ್ ಸಾಧ್ಯತೆ ಇದೆ ದಾಖಲೆಯ ಪ್ರಕಾರ ಬಾಲಕಿಗೆ 15 ವರ್ಷ 8 ತಿಂಗಳು ಇತ್ತು. ಇತಿಚ್ಚಿಗಷ್ಟೇ ಸೇತುವೆ ಮೇಲಿಂದ ನದಿಗೆ ತಳ್ಳಿ ಆತನನ್ನು ಹತ್ಯೆ ಮಾಡಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.