ಚಾಮರಾಜನಗರ: ಜಿಲ್ಲೆಯಲ್ಲಿ ಹೆತ್ತ ಮಗುವನ್ನೇ ಕಲ್ಲು ಹೃದಯದ ತಾಯಿಯೊಬ್ಬಳು ಬೇಲಿಗೆ ಪಂಚೆಯಲ್ಲಿ ಸುತ್ತಿ ಎಸೆದಿರುವಂತ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಕಂಡು ಪೊಲೀಸರಿದೆ ಜನರು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ 10 ರಿಂದ 15 ದಿನದ ನವಜಾತ ಹೆಣ್ಣು ಶಿಶುವೊಂದನ್ನು ಪಂಚೆಯಲ್ಲಿ ಸುತ್ತಿಟ್ಟು ಹೋಗಿರುವಂತ ಘಟನೆ ನಡೆದಿದೆ.
ಈ ಬಗ್ಗೆ ಸ್ಥಳೀಯರಾದಂತ ಪರಮೇಶ್ ಎಂಬುವರು ದಾರಿಯ ಪಕ್ಕದ ಮಗು ಕಂಡು ಕೂಡಲೇ ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಂಗನವಾಡಿ ಕಾರ್ಯಕರ್ತೆ ಭೇಟಿ ನೀಡಿ, ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ.
ಸದ್ಯ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಸಾಡಿ ಹೋದ ಘಟನೆ ತಿಳಿದು ಆಸ್ಪತ್ರೆಗೆ ಹತ್ತಾರು ಜನರು ಭೇಟಿ ನೀಡಿ ಮರುಕ ವ್ಯಕ್ತ ಪಡಿಸಿದ್ದಾರೆ.
ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನ
‘GPay, PhonePe, Paytm’ನಲ್ಲಿ ಪಾವತಿ ವಿಫಲವಾದ್ರು ಹಣ ಕಟ್ ಆಗಿದ್ಯಾ.? ಈ ಹಂತ ಅನುಸರಿಸಿ, ಮರಳಿ ಖಾತೆ ಸೇರುತ್ತೆ