* ಅವಿನಾಶ್ ಆರ್ ಭೀಮಸಂದ್ರ
ಮೈಸೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನ ಸಮಾವೇಶದಲ್ಲಿ ಮಾತನಾಡಿದರು.
ಇದೇ ವೇಳೆ ಅವರು ವಿಪಗಳ ವಿರುದ್ದ ಹರಿಹಾಯ್ದು ಗ್ಯಾರಂಟಿ ಕೆಲವೇ ಕೆಲವು ತಿಂಗಳು ಇರುತ್ತದೆ ಅಂಥ ಹೇಳುತ್ತಿದ್ದಾರೆ, ಆದರೆ ಅದು ಸುಳ್ಳು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ ಅಂತ ಹೇಳಿದರು. ಇನ್ನೂ ಗ್ಯಾರಂಟಿಗಳಿಂದ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತಿದೆ ಅಂಥ ಹೇಳಿದರು.
ಇದೇ ವೇಳೇ ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಪಿ ಮಾಡುತ್ತಿದೆ. ಇನ್ನೂ ಮುಂಬರುವ ಬಿಹಾರ ಚುನಾವಣೆಯಲ್ಲಿ ಕೂಡ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ಹೇಳಿದ್ದಾರೆ. ಬಿಹಾರದಲ್ಲಿ ನಿಮ್ಮ ಸಮಿಶ್ರ ಸರ್ಕಾರ ಇದೇ ಅಲ್ವ ನಿಮಗೆ ನಾಚಿಕೆ ಆಗುವುದಿಲ್ಲವೇ ಪ್ರಧಾನಿ ನರೇಂದ್ರ ಮೋದಿಯವರೇ ಅಂತ ಮೋದಿಗೆ ಟಾಂಗ್ ನೀಡಿದರು. ಇನ್ನೂ ನಮ್ಮ ಸರ್ಕಾರದ ಯೋಜನೆಗಳನ್ನು ಕಾಪಿ ಮಾಡುತ್ತಿದ್ದೀರಾ ಅಂತ ಕುಟುಕಿದರು. ಇನ್ನೂ ಅಂಬೇಡ್ಕರನ್ ಕಾಂಗ್ರೆಸ್ ಸೋಲಿಸಿದೆ ಅಂತ ಹೇಳುತ್ತಾರೆ,. ಆದೇ ಅಂಬೇಡ್ಕರ್ ಅವರು ಸಾರ್ವಕರ್ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಗಮನಿಸಿ ಅಂತ ಹೇಳಿದರು. ಸಂವಿಧಾನವನ್ನು ನಾವು ಕಾಪಾಡುತ್ತೇವೆ, ಆದರೆ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತಾರೆ ಅಂತ ಹೇಳಿದರು.