ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಶನಿವಾರ ವ್ಯಾಪಾರ ಒಪ್ಪಂದದ ಮೂಲಕ ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲಾಗಿದೆ, ಎರಡೂ ದೇಶಗಳ ನಡುವಿನ ಪರಿಸ್ಥಿತಿ ಗಂಭೀರವಾಗಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ಪರಸ್ಪರ ಕ್ರಮ ಕೈಗೊಳ್ಳುತ್ತಿದ್ದವು. ವಿಮಾನಗಳನ್ನು ಗುರಿಯಾಗಿಸಲಾಗುತ್ತಿತ್ತು. 5 ವಿಮಾನಗಳನ್ನು ಹೊಡೆದುರುಳಿಸಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ. ವ್ಯಾಪಾರವನ್ನು ಆಯುಧವಾಗಿ ಬಳಸುವ ಮೂಲಕ ಈ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂದು ಅಧ್ಯಕ್ಷರು ಹೇಳಿಕೊಂಡಿದ್ದಾರೆ.
‘ನಾವು ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ ಮತ್ತು ಅದು ದೊಡ್ಡದಾಗುತ್ತಿದೆ. ನಾವು ಅದನ್ನು ವ್ಯಾಪಾರದ ಮೂಲಕ ಪರಿಹರಿಸಿದ್ದೇವೆ. ನೀವು ಶಸ್ತ್ರಾಸ್ತ್ರಗಳನ್ನು ಮತ್ತು ಬಹುಶಃ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ, ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ನಾವು ಹೇಳಿದ್ದೇವೆ.’ ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸುವ ಬಗ್ಗೆ ಟ್ರಂಪ್ ಹೇಳಿಕೆ ನೀಡಿದರು ಮತ್ತು ಅದರಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ ಎಂದು ಹೇಳಿದರು.