ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು ಪೊಲೀಸರ ವಿಚಾರಣೆಗೆ ಹಾಜರಾಗಲಿದ್ದು, ಈ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದು ದೂರು ಕೊಟ್ಟವರಿಂದಲೇ ಶಾಸಕ ಭೈರತಿ ಬಸವರಾಜ್ ಅವರ ಹೆಸರು ಉಲ್ಲೇಖಿಸಿದ್ದಾರೆ. ಹಾಗಾಗಿ ಇದರಲ್ಲಿ ಯಾವುದೇ ರಾಜಕೀಯ ಪ್ರೇರಿತ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರು ಕೊಟ್ಟವರು ಬೈರತಿ ಬಸವರಾಜ್ ಹೆಸರನ್ನು ಉಲ್ಲೇಖಿಸಿದ್ದಾರೆ ಭೈರತಿ ವಿರುದ್ಧದ ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರೇರಿತ ಇಲ್ಲ. ಅವರನ್ನು ಇಟ್ಟುಕೊಂಡು ಯಾವ ರಾಜಕೀಯ ಮಾಡುತ್ತಿದ್ದಾರೆ? ನಮ್ಮ ಸರ್ಕಾರ ಬಂದು ಎರಡುವರೆ ವರ್ಷ ಆಯ್ತು ಈ ಎರಡುವರೆ ವರ್ಷದಲ್ಲಿ ರಾಜಕೀಯ ಪ್ರೇರಿತ ಪ್ರಕರಣಗಳು ಎಷ್ಟಾಗಿವೆ?
ಬಸವರಾಜ್ ಅವರ ಬಗ್ಗೆ ಯಾವ ರಾಜಕೀಯ ಮಾಡೋಕೆ ಹೊರಟಿದ್ದೀರಾ? ಎಲ್ಲಾ ಕಾನೂನು ಪ್ರಕಾರ ಕ್ರಮ ಆಗುತ್ತದೆ ಕಂಪ್ಲೇಂಟ್ ಕೊಟ್ಟವರು ಭೈರತಿ ಹೆಸರು ಹೇಳದೆ ಇದ್ದರೆ ಇವರ ಹೆಸರು ಬರುತ್ತಿರಲಿಲ್ಲ ಕೊಲೆಯಾದ ವ್ಯಕ್ತಿಯ ತಾಯಿ ಭೈರತಿ ಬಸವರಾಜ್ ಹೆಸರನ್ನೇ ಉಲ್ಲೇಖಿಸಿರುವಾಗ ಯಾವುದೇ ರಾಜಕೀಯ ಪ್ರೇರಿತ ಇದರಲ್ಲಿ ಕಂಡುಬರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.