ಬೆಂಗಳೂರು : ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ಗನ್ ತೋರಿಸಿ ಶ್ರೀನಿಧಿ ಎನ್ನುವ ವ್ಯಕ್ತಿಯನ್ನು ಅಪಹರಣ ಮಾಡಲಾಗಿದೆ ಅಪಹರಣ ಪ್ರಕರಣದ ತನಿಖೆಯನ್ನು ಆನೇಕಲ್ ಪೊಲೀಸರು ಇದೀಗ ಹಳಹರಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಹೌದು ನೂರಾರು ಕೋಟಿ ಮೌಲ್ಯದ ಆಸ್ತಿ ವಿಚಾರಕ್ಕೆ ಶ್ರೀನಿಧಿ ಎನ್ನುವ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಕೋರ್ಟ್ ಬಳಿ ಈ ಒಂದು ಅಪಹರಣ ಘಟನೆ ನಡೆದಿತ್ತು. ವಾಬಸಂದ್ರದ ನಿವಾಸಿ ಶ್ರೀನಿಧಿ (29) ಎನ್ನುವ ಯುವಕನನ್ನು ಅಪಹರಿಸಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಅಪಹರಣದ ಪ್ರಕರಣದ ತನಿಖೆಯನ್ನು ಪೊಲೀಸರು ಇದೀಗ ಹಳ್ಳ ಹಿಡಿಸಿದ್ದಾರೆ ಎನ್ನಲಾಗುತ್ತಿದ್ದು, ಜುಲೈ 11ರಂದು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ಶರಣಾಗಿದ್ದರು.
ಪದ್ಮನಾಭ ಮತ್ತು ಶ್ರೀನಿಧಿ ನಡುವೆ ಆಸ್ತಿ ವಿಚಾರವಾಗಿ ವಿವಾದ ಇತ್ತು ಈ ವೇಳೆ ಇವರ ಮಧ್ಯ ವಕೀಲ ನಂದೀಶ್ ಎನ್ನುವ ವ್ಯಕ್ತಿ ಎಂಟ್ರಿ ಕೊಟ್ಟಿದ್ದು ಪದ್ಮನಾಭ ಅವರಿಂದ ಹಣ ಪಡೆದು ನಿಮಗೆ ಆಸ್ತಿ ನಿಮ್ಮ ಪರವಾಗಿ ಬರುವಂತೆ ಮಾಡುತ್ತೇನೆ ಎಂದು ಹೇಳಿ ಶ್ರೀನಿಧಿಯನ್ನು ಅಪಹರಿಸುತ್ತಾರೆ. ಈ ವೇಳೆ ಶ್ರೀನಿಧಿ ತಾನು ಇದ್ದ ಸ್ಥಳದಲ್ಲಿ ಒಬ್ಬ ಕ್ಲರ್ಕ್ ಗೆ ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ನನಗೆ ಸಹಾಯ ಮಾಡಿ ಎಂದು ಹೇಳಿದಾಗ ತಕ್ಷಣ ಕ್ಲರ್ಕ್ ಸಮೀಪದ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸುತ್ತಾರೆ.
ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ವಕೀಲ ನಂದಿಶ ಸೇರಿದಂತೆ ಇತರರು ಸ್ಥಳದಿಂದ ಎಸ್ಕೇಪ್ ಆಗುತ್ತಾರೆ. ಈ ವೇಳೆ ಶ್ರೀನಿಧಿಯನ್ನು ಸ್ಥಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಈ ಒಂದು ಪ್ರಕರಣದಲ್ಲಿ ಸುಮಾರು 15ರಿಂದ 16 ಜನರು ಇದ್ದು ಪೊಲೀಸರು 11 ಜನರನ್ನು ಮಾತ್ರ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ, ಹಾಗಾಗಿ ಈ ಒಂದು ಪ್ರಕರಣವನ್ನು ಪೊಲೀಸರೇ ಹಳ್ಳ ಹಿಡಿಸಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.