ದಾವಣಗೆರೆ : ಇತ್ತೀಚಿಗೆ ಚಾಕ್ಲೆಟ್ ನಲ್ಲಿ ಗಾಂಜಾ ಡ್ರಗ್ಸ್ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಇದೀಗ ದಾವಣಗೆರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಾನ್ ಶಾಪ್ ಇಟ್ಟುಕೊಂಡು ಗಾಂಜಾ ಮಿಶ್ರಿತ ಜಾಕೊಲೇಟ್ ಮಾರಾಟ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಇದೀಗ ಗಾಂಜಾ ಮಿಶ್ರಿತ ಚಾಕ್ಲೆಟ್ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ.
ಪ್ಯಾರೆಲಾಲ್ ಅಲಿಯಾಸ್ ರಾಜು (38) ಬಂಧಿತ ಆರೋಪಿ. ಆರೋಪಿಯು ದಾವಣಗೆರೆ ನಗರದ ರಾಮ್ ಅಂಡ್ ಕೋ ಸರ್ಕಲ್ಲ್ಲಿ ರಾಜು ಪಾನ್ ಶಾಪ್ ಹೆಸರಿಲ್ಲಿ ಅಂಗಡಿ ನಡೆಸುತ್ತಿದ್ದ. ಈತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಿಶ್ರಿತ ಚಾಕೋಲೇಟ್ ಪಾನ್ ಮಾರಾಟ ಮಾಡುತ್ತಿದ್ದ. ಅಲ್ಲದೆ, ತನ್ನ ಅಪ್ರಾಪ್ತ ಮಗನ ಕೈಯಲ್ಲಿ ಗಾಂಜಾ ಮಿಶ್ರಿತ ಪಾನ್ ಕೊಟ್ಟು ಕಾಲೇಜುಗಳ ಬಳಿ ಮಾರಾಟ ಮಾಡಿಸುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.