ತುಮಕೂರು: BSW ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ತುಮಕೂರು ವಿಶ್ವ ವಿದ್ಯಾಲಯದಿಂದ ಹೊಸದಾಗಿ BSW ಕೋರ್ಸ್ ಆರಂಭಿಸಲಾಗುತ್ತಿದೆ. ಈ ವರ್ಷದ ವ್ಯಾಸಂಗಕ್ಕೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದಂತ ವಿದ್ಯಾರ್ಥಿಗಳಿಗೆ ಕೋರ್ಸ್ ದಾಖಲಾತಿ ಕೂಡ ಆರಂಭಿಸಲಾಗಿದೆ.
ಈ ಕುರಿತು ತುಮಕೂರು ವಿವಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025-26ನೇ ಶೈಕ್ಷಣಿಕ ಸಾಲಿಗೆ B. S. W (ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್) ಎಂಬ ಹೊಸ ವಿಭಾಗವನ್ನು ಪ್ರಾರಂಭಿಸಿದ್ದು, ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಹಾಗೂ ಪ್ರಾoಶುಪಾಲರು ದಯಮಾಡಿ ದ್ವಿತೀಯ PUC ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ B. S. W Course ಪ್ರಾರಂಭಿಸಿರುವ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಇನ್ನೂ ಸ.ಪ್ರ.ದ.ಕಾ ತುಮಕೂರು ವಿಶ್ವವಿದ್ಯಾನಿಲಯ ಅಡಿಯಲ್ಲಿ ಬರುವ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಕಾಲೇಜುಗಳಲ್ಲಿ ಪ್ರವೇಶ ಆರಂಭವಾಗಿದೆ ಎಂದು ತಿಳಿಸಿದೆ.
Job Opportunities for BSW and MSW Course
I.ಸರ್ಕಾರಿ ಉದ್ಯೋಗವಕಾಶಗಳು :-
1.ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿಯಾಗಿ (CDPO)
2.ಸಹಾಯಕ ಮಕ್ಕಳ ಯೋಜನಾ ಅಧಿಕಾರಿಯಾಗಿ (ACDPO)
3 ಕಾರ್ಮಿಕ ಕಲ್ಯಾಣ ಅಧಿಕಾರಿ (Labour welfare Officer)
4.ವೈದ್ಯಕೀಯ ಮತ್ತು ಮನೋ ವೈದ್ಯಕೀಯ ಸಮಾಜಕಾರ್ಯಕರ್ತರು (Medical and psychiatric Social worker)
5.ಆಪ್ತ ಸಮಾಲೋಚಕರು (Counselor)
6.ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ
7.ಸಮಾಜ ಕಲ್ಯಾಣ ಅಧಿಕಾರಿ
8. ಪದವಿ ನಂತರದ ಎಲ್ಲಾ ಸರ್ಕಾರಿ ಉದ್ಯೋಗಗಳು(IAS, KAS, FDA, SDA, Police etc,.)
II.ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳು :-
ಮಾನವ ಸಂಪನ್ಮೂಲ ಅಧಿಕಾರಿಯಾಗಿ (Human resource Manager)
Labour welfare officer (ಕೈಗಾರಿಕೆಗಳ ಕಾರ್ಮಿಕ ಕಲ್ಯಾಣ ಅಧಿಕಾರಿ)
ಯೋಜನಾ ಅಧಿಕಾರಿ (Project Officer)
ಯೋಜನಾ ಸಂಯೋಜನ ಅಧಿಕಾರಿ (Project co-ordinator)
ಯೋಜನಾ ವ್ಯವಸ್ಥಾಪಕರು (Project Manager)
ಸಂಶೋಧನೆ ಸಹಾಯಕರು (Research assistant)
ಸಂಶೋಧನಾ ಅನ್ವೇಷಕ (Research Investigator)
ವೈದ್ಯಕೀಯ ಮತ್ತು ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತರು (Medical and psychiatric Social worker)
ಆಪ್ತ ಸಮಾಲೋಚಕರು (Counselor)
ನೀತಿ ನಿರೂಪಕ (Policy maker)
ಕ್ಷೇತ್ರ ಅಧಿಕಾರಿ (Field officer)
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾಕ್ಟರ್ ವೇಣುಗೋಪಾಲ್ ಜಿಎಸ್ 9686366199 ಸಂಪರ್ಕಿಸಿ