ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಭೇಟಿಗೆ ಇಂದು ನಟ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಧನ್ವೀರ್ ಪರಪ್ನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನಅಗ್ರಹಾರ ಜೈಲು ಸೇರಿ ದರ್ಶನ್ ಎರಡು ತಿಂಗಳಾಗಿದೆ. ಈ ನಡುವೆ ನಟ ಅಭಿಷೇಕ್ ಅಂಬರೀಶ್ ಇದೇ ಮೊದಲ ಬಾರಿಗೆ ದರ್ಶನ್ ಭೇಟಿಗೆ ಆಗಮಿಸಿದ್ದಾರೆ. ಈ ವೇಳೆ ಅಭಿಷೇಕ್ ಅಂಬರೀಶ್ ಗೆ ನಟ ಚಿಕ್ಕಣ್ಣ, ಧನ್ವೀರ್ ಸಾಥ್ ನೀಡಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಒಳತಿಗಾಗಿ ಇಂದು ಹೋಮ, ಹವನ ನಡೆಸಲಾಗುತ್ತಿದ್ದು, ಸ್ಯಾಂಡಲ್ ವುಡ್ ಹಿರಿಯ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಭಾಗಿಯಾಗಿದ್ದಾರೆ.