ಧಾರವಾಡ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷ ಅಂದ್ರೇ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈದಿ ಫ್ಯಾಮಿಲಿ ಥರ ಆಗಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಹೆಸರು ಇಡುವಂತೆ ಒತ್ತಾಯ ಕೇಳಿ ಬಂದಿವೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದಿರೋ ಕಾಮೆಂಟ್ ನೋಡಿದೆ. ಹೆದ್ದಾರಿಗೆ ದೇವೇಗೌಡರ ಹೆಸರಿಡಿ, ಒಂದು ಬದಿಯ ಸರ್ವಿಸ್ ರಸ್ತೆಗೆ ಕುಮಾರಸ್ವಾಮಿ, ಮತ್ತೊಂದಕ್ಕೆ ರೇವಣ್ಣ, ಸೇತುವೆಗೆ ಪ್ರಜ್ವಲ್ ರೇವಣ್ಣ, ಅಂಡರ್ ಪಾಸ್ ಗೆ ನಿಖಿಲ್ ಹೆಸರು, ಫ್ಲೈಓವರ್ ಗೆ ಅನಿತಾ ಕುಮಾರಸ್ವಾಮಿ ಎಂದಿದ್ದಾರೆ ಎಂದು ಹೇಳುವ ಮೂಲಕ ಲೇವಡಿ ಮಾಡಿದರು.
ಇದೇ ವೇಳೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಮಾತನಾಡಿದಂತ ಅವರು, ಈ ಬಗ್ಗೆ ಸಿಎಂ ಬೊಮ್ಮಾಯಿಯವರು ಕ್ಯಾಬಿನೆಟ್ ನಲ್ಲಿ ದೃಢವಾದಂತ ನಿರ್ಧಾರ ಮಾಡಿದ್ದಾರೆ. ವರದಿಯ ಬಳಿಕ, ಸೂಕ್ತ ಹೆಜ್ಜೆಯನ್ನು ಇಡಲಿದ್ದಾರೆ ಎಂದರು.
BIG BREAKING NEWS: 2022-23ನೇ ಸಾಲಿನ ಬಿ.ಇಡಿ ಕೋರ್ಸ್ ಗೆ ಆಯ್ಕೆ ಪಟ್ಟಿ ಪ್ರಕಟ | B.Ed Course Admission
BREAKING NEWS: ಸ್ಯಾಂಟ್ರೋ ರವಿ ಜತೆ ಸಚಿವ ಎಸ್.ಟಿ ಸೋಮಶೇಖರ್ ಇರೋ ವಿಡಿಯೋ ಬಿಡುಗಡೆ ಮಾಡಿದ HDK