ಬೆಂಗಳೂರು: 2022-23ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸ್ ನ ದಾಖಲಾತಿಗೆ ( B.Ed Course Admission 2023 ) ಸಂಬಂಧಿಸಿದಂತೆ ಸರ್ಕಾರಿ ಕೋಟಾದ ಸೀಟುಗಳ ಆಯ್ಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಕೇಂದ್ರೀಕೃತ ದಾಖಲಾತಿ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 2022-23ನೇ ಸಾಲಿನ ಬಿಇಡಿ ಕೋರ್ಸ್ ಗೆ ದಾಖಲಾತಿ ಸಂಬಂಧ ಸರ್ಕಾರಿ ಕೋಟಾದ ಸೀಟುಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಭರ್ತಿ ಮಾಡವು ಸಂಬಂಧ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಎಂದಿದೆ.
ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ, ನಿಯಮಾನುಸಾರ ಮೆರಿಟ್ ಮತ್ತು ಮೀಸಲಾತಿಯನ್ವಯ ಕಾಲೇಜು ಸಹಿತ ಸೀಟು ಹಂಚಿಕೆ ಆಯ್ಕೆ ಪಟ್ಟಿ, ಅರ್ಹತಾಪಟ್ಟಿ, ತಿರಸ್ಕೃತ ಪಟ್ಟಿಯನ್ನು ಇಲಾಖೆಯ ಜಾಲತಾಣ http://schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ.
ಅಂದಹಾಗೇ ರಾಜ್ಯದ ಬಿಇಡಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಇರುವಂತ ಸರ್ಕಾರಿ ಕಾಲೇಜುಗಳ ಸಂಖ್ಯೆ 09 ಆಗಿದ್ದರೇ ಇಲ್ಲಿ 850 ಸೀಟುಗಳು ಲಭ್ಯವಿದ್ದಾವೆ. ಅನುದಾನಿತ ಕಾಲೇಜುಗಳು 50 ಇದ್ದರೇ, 2688 ಸೀಟುಗಳು ಇಲ್ಲಿ ಲಭ್ಯವಿವೆ. ಅನುದಾನ ರಹಿತ ಕಾಲೇಜುಗಳ ಸಂಖ್ಯೆ 335 ಆಗಿದ್ದರೇ, ಇವುಗಳಲ್ಲಿ 13,937 ಸೀಟುಗಳು ಲಭ್ಯವಿದ್ದಾವೆ.
ಈ ಬಾರಿ 56,548 ಅಭ್ಯರ್ಥಿಗಳು ಬಿ.ಇಡಿ ಕೋರ್ಸ್ ಗೆ ( B.Ed Course ) ದಾಖಲಾಗುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇವರಲ್ಲಿ 17,475 ಅಭ್ಯರ್ಥಿಗಳು ಆಯ್ಕೆಯಾಗಿದ್ದರೇ, 37,591 ಅರ್ಹತಾ ಪಟ್ಟಿಯಲ್ಲಿದ್ದರೇ, 1482 ಮಂದಿ ಅರ್ಜಿಯು ತಿರಸ್ಕೃತಗೊಂಡಿವೆ.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಶೀಘ್ರವೇ ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನು ಸ್ವರೂಪ – ಸಿಎಂ ಬೊಮ್ಮಾಯಿ ಘೋಷಣೆ