ಹೊಸಪೇಟೆ : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಒಳಗೊಂಡಂತೆ) ಮಾಸಿಕ 75 ಯುನಿಟ್ಗಳ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ರಮವನ್ನು ಅಮೃತ ಜ್ಯೋತಿ ಕಾರ್ಯಕ್ರಮ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೊಸಪೇಟೆ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಪೇಟೆ ನಗರದ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಬಡಾವಣೆ, ಇಂಡಸ್ಟ್ರೀಯಲ್ ಏರಿಯಾ, ಅಮರಾವತಿ, ಸಾಯಿರಾಂ ಬಡಾವಣೆ, ಮಲ್ಲಿನಾಥ್ ಲೇಔಟ್, ಚಿತ್ತವಾಡಿಗಿ, ಕಲ್ಯಾಣ ನಗರ, ಪಟೇಲ್ ನಗರ, ಅನ್ನಪೂರ್ಣ ಬಡಾವಣೆ, ಕಾಲೇಜ್ ರಸ್ತೆ, ಇಂದಿರಾ ನಗರ, ಚಾಪಲ್ಗಟ್ಟ, ಸ್ಟೇಷನ್ ರೋಡ್ ಏರಿಯಾ, ಭಾರತಿ ನಗರ, ರೈಲ್ವೆ ಸ್ಟೇಷನ್, ಶ್ರೀರಾಮ್ ಪಾರ್ಕ್, ರಾಯಾಲ್ ಆರ್ಕೇಡ್, ಚಲುವಾದಿ ಕೇರಿ, ಜಬ್ಬಲ್ ಸರ್ಕಲ್ ಏರಿಯಾಗಳು ಘಟಕ-1ರ ಶಾಖಾ ವ್ಯಾಪ್ತಿಯಲ್ಲಿ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅರ್ಜಿ ನೊಂದಾಯಿಸಲು ಘಟಕ-1ರ ಶಾಖಾಧಿಕಾರಿಗಳಾದ ಎಂ.ಆರ್.ಅರ್ಜುನ್ ಅವರ ಮೊ.ಸಂ.9448395693 ಗೆ ಸಂಪರ್ಕಿಸಬಹುದು.
ಎನ್.ಸಿ. ಕಾಲೋನಿ, ಚಪ್ಪದರದಳ್ಳಿ, ಎಸ್.ಆರ್. ನಗರ, ಎಂ.ಜೆ.ನಗರ, ಗಾಂಧಿ ಕಾಲೋನಿ, ಬಿಟಿಆರ್ ನಗರ, ವಿದ್ಯಾ ನಗರ, ಭಗತ್ ಸಿಂಗ್ ನಗರ, ಸಂಡೂರು ರಸ್ತೆ, ವಿದ್ಯಾರಣ್ಯ ನಗರ, ವಿವೇಕಾನಂದ ನಗರ, ಜೋಳದರಾಶಿ ಗುಡ್ಡ, ಸಾಯಿಬಾಬಾ ಸರ್ಕಲ್, ಗೋಕುಲ ನಗರ, ಸೋನಿಯಾ ನಗರ, ಇಂದಿರಾ ನಗರ, ವಂಕಾಯ ಕ್ಯಾಂಪ್, ಜನತಾ ಕಾಲೋನಿ, ರಾಯರಕೆರೆ, ನಿಶಾನಿ ಕ್ಯಾಂಪ್, ಡ್ರೆಸೆಸ್ ಕ್ಯಾಂಪ್, ಪಿಎಲ್ಸಿ ಏರಿಯಾ, ಟಿಬಿ ಡ್ಯಾಂ ಏರಿಯಾ ಹಾಗೂ ಇತರೆ ಏರಿಯಾಗಳು ಘಟಕ-2ರ ಶಾಖಾ ವ್ಯಾಪ್ತಿಯಲ್ಲಿ ಒಳಪಟ್ಟಿರುತ್ತದೆ ಆದ ಕಾರಣ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನೊಂದಾಯಿಸಲು ಘಟಕ-2ರ ಶಾಖಾಧಿಕಾರಿಗಳಾದ ಎನ್.ಗವಿಸಿದ್ದಪ್ಪ ಅಡೂರು ಅವರ ಮೊ.ಸಂ: 9448395692ಗೆ ಸಂಪರ್ಕಿಸಬಹುದು.
ಗ್ರಾಹಕರು https://sevasindhuservices.karnataka.gov.in/ ಜಾಲಾತಾಣದಲ್ಲಿ(ವೆಬ್ಸೆಟ್) ನಲ್ಲಿ ಅರ್ಜಿಯನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ಜೆಸ್ಕಾಂ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.