ಮಂಗಳೂರು : ಡಿ.1 ರಿಂದ ಸುರತ್ಕಲ್ ಟೋಲ್ ಸಂಗ್ರಹವಿಲ್ಲ ಎಂದು ದ. ಕ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಹೇಳಿದ್ದಾರೆ.
ಸುರತ್ಕಲ್ ಟೋಲ್ ರದ್ದುಗೊಳಿಸಿ ಆದೇಶ ಹೊರಡಿಸಿರುವಂತೆ ಡಿ.1 ರಿಂದ ಸುರತ್ಕಲ್ ನಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಂಗಳೂರಿನ ಸುರತ್ಕಲ್ ಬಳಿಯಲ್ಲಿನ ಟೋಲ್ ಸಂಗ್ರಹ ವಿರೋಧಿಸಿ ನಡೆಯುತ್ತಿದ್ದಂತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ಸಂಗ್ರಹವನ್ನು ರದ್ದುಗೊಳಿಸಲಾಗಿದೆ.
ಅಂದಹಾಗೇ 2015ರಲ್ಲಿ ಮಂಗಳೂರಿನ ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ನಿರ್ಮಿಸಿ, ಹಣ ವಸೂಲಿ ಮಾಡಲಾಗುತ್ತಿತ್ತು. ಹೈವೇಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕು ಎಂಬ ನಿಯಮವನ್ನೇ ಗಾಳಿಗೆ ತೂರಿ ಸುರತ್ಕಲ್ ಬಳಿಯಲ್ಲಿ ಟೋಲ್ ನಿರ್ಮಿಸಿ ಹಣ ಸಂಗ್ರಹಿಸಲಾಗುತ್ತಿತ್ತು. ಈ ಟೋಲ್ ರದ್ದುಗೊಳಿಸುವಂತೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು.ಕಳೆದ ಕೆಲ ದಿನಗಳಿಂದ ಟೋಲ್ ಗೇಟ್ ಮುಚ್ಚುವಂತೆ ಅನಿರ್ಧಿಷ್ಟಾವಧಿಯವರೆಗೆ ಧರಣಿಯನ್ನು ಕಾಂಗ್ರೆಸ್ ಪಕ್ಷದ ನಾಯಕರು, ಡಿವೈಎಸ್ಪಿ, ಸಿಪಿಐಎಂ ಸೇರಿದಂತೆ ಸಮಾನ ಮನಸ್ಕರ ಸಂಘಟನೆಗಳು ನಡೆಸುತ್ತಿದ್ದವು. ಅಕ್ಟೋಬರ್ 28ರಂದು ಸುಲತ್ಕಲ್ ಟೋಲ್ ಗೆ ಮುತ್ತಿಗೆ ಹಾಕುವಂತ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರು ಹೊರವಲಯದಲ್ಲಿನ ಸುಲತ್ಕಲ್ ಬಳಿಯ ಟೋಲ್ ಸಂಗ್ರಹವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘ನಮ್ಮ ಕ್ಲಿನಿಕ್’ನಲ್ಲಿ ಖಾಲಿ ಇರುವ ‘ವೈದ್ಯರ ಹುದ್ದೆ’ ಅರ್ಜಿ ಆಹ್ವಾನ
‘ಹಗರಣಗಳ ಬೇರುಗಳೆಲ್ಲವೂ ಕಾಂಗ್ರೆಸ್ ಬುಡದಲ್ಲೇ ಅಡಗಿದೆ’ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ