ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಹೂಡಿದ್ದ ಎರಡು ಐಇಡಿಗಳನ್ನ(IEDs) ಸಶಸ್ತ್ರ ಪಡೆಗಳು ಶನಿವಾರ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿವೆ. ಈ ಮೂಲಕ ದೊಡ್ಡ ದುರಂತವನ್ನ ತಪ್ಪಿದಂತಾಗಿದೆ.
ಕುಲ್ಗಾಮ್ ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
“ಕುಲ್ಗಾಮ್ ಪೊಲೀಸರು 1 RR ಸೈನ್ಯದೊಂದಿಗೆ ಕುಲ್ಗಾಮ್ ಜಿಲ್ಲೆಯ ಫ್ರಿಸಾಲ್ ಪ್ರದೇಶದಲ್ಲಿ ಭಯೋತ್ಪಾದಕರು ನೆಟ್ಟಿದ್ದ 02 ಐಇಡಿಗಳನ್ನ (01 Timer & other Sticky) ಪತ್ತೆಹಚ್ಚಿದ್ದು, ಅವುಗಳನ್ನ ನಿಷ್ಕ್ರಿಯಗೊಳಿಸುವ ಮೂಲಕ ದೊಡ್ಡ ದುರಂತವನ್ನ ತಪ್ಪಿಸಿದ್ದಾರೆ. ಪ್ರದೇಶವನ್ನ ಸುತ್ತುವರೆದಿದ್ದು, ಶೋಧ ಮುಂದುವರೆದಿದೆ” ಎಂದು ಕುಲ್ಗಾಮ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
Kulgam Police along with 1 RR Army averted a Major tragedy by detecting & subsequently diffusing 02 IEDs (01 Timer & other Sticky) planted by Terrorists in Frisal area of Kulgam District.Area has been cordoned off and searches going on Further details shall follow.@KashmirPolice pic.twitter.com/D0tibGh4VG
— District Police Kulgam: official (@policekulgam) November 26, 2022
BREAKING NEWS : ಇಟಲಿಯ ‘ಹಾಲಿಡೇ ಐಲ್ಯಾಂಡ್’ನಲ್ಲಿ ಭೂ ಕುಸಿತ ; 8 ಜನ ಸಾವು, ಘಟನೆಯ ಭಯಾನಕ ವಿಡಿಯೋ ಇಲ್ಲಿದೆ