ರಾಮನಗರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯರು ಬಾಣಂತಿ ಡಿಸ್ಚಾರ್ಜ್ಗೆ ಲಂಚದ ಬೇಡಿಕೆಯಿಟ್ಟ ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರು ವೈದ್ಯ ಸಿಬ್ಬಂದಿ ಅಮಾನತು ಮಾಡಲಾಗಿದೆ
ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತೆ ಎಂದು ತೆರಳುವ ಬಡವರಿಗೆ ವೈದ್ಯರಿಂದ ಕಿರುಕುಳ ಹೆಚ್ಚಾಗಿದ್ದು ಇದೀಗ ಇಂತಹದ್ದೇ ಬಿಡದಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ ನಡೆಯುತ್ತಿದೆ. ಆಸ್ಪತ್ರೆ ವೈದ್ಯರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ರೋಗಿಯ ಪೋಷಕರಿಂದ ಹಣ ಬೇಡಿಕೆ ಇಟ್ಟಿದ್ದ ವೀಡಿಯೋ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಬಿಡದಿಯ ನಿಂಗೇಗೌಡನ ದೊಡ್ಡಿಯ ಮಂಜಪ್ಪ ಅವರು ಅವರ ಪತ್ನಿಯನ್ನು ಬಿಡದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯರಿಗೆ ಎರಡು ಸಾವಿರ ಹಣ ನೀಡಲು ಹೋಗಿದ್ದಾರೆ. ಆದರೆ ಆ ವೈದ್ಯರು ಕೊಟ್ಟಷ್ಟು ಹಣವನ್ನು ಒಪ್ಪಿಕೊಳ್ಳದೇ ಸತಾಯಿಸಿದ್ದರು. ಮೇಲಿನ ವೈದ್ಯರಿಗೆ ಎರಡು ಸಾವಿರ ರೂ. ನನಗೆ ಎರಡು ಸಾವಿರ ರೂ. ಮತ್ತೊಬ್ಬ ವೈದ್ಯರಿಗೆ ಎರಡು ಸಾವಿರ ರೂ. ಹಂಚಬೇಕು ಎಂದು ಡಾ ಶಶಿಕಲಾ ಹೇಳಿರೋದು ಮೊಬೈಲ್ನಲ್ಲಿ ಸೆರೆಯಾಗಿದೆ.
ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆಯವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಈಕೆಗೆ ಸಾಥ್ ನೀಡಿರೋದು ಅಲ್ಲಿನ ಮತ್ತೊಬ್ಬ ವೈದ್ಯೆ ಡಾ. ಐಶ್ವರ್ಯ. ನಿಮ್ಮೊಬ್ಬರ ಬಳಿ ಎರಡು ಸಾವಿರ ರೂ. ಪಡೆದುಕೊಂಡ್ರೆ ವಾರ್ಡ್ನಲ್ಲಿ ದಾಖಲಾಗಿರುವ ಎಲ್ಲರೂ ಹಾಗೆ ಮಾಡ್ತಾರೆ ಎಂದು ಹೇಳಿದ್ದಾರೆ.