ನವದೆಹಲಿ : ಭಾರತೀಯ ರೈಲ್ವೆಯ ಉತ್ತರ ಮಧ್ಯ ರೈಲ್ವೆ (NCR) ವಲಯವು ನಾಲ್ಕು ರೈಲುಗಳನ್ನ ಸಂಯೋಜಿಸುವ ಮೂಲಕ 2.7 ಕಿಲೋಮೀಟರ್ ಉದ್ದದ ಸರಕು ಸಾಗಣೆ ರೈಲನ್ನ ಓಡಿಸುವ ಮೂಲಕ ದಾಖಲೆ ನಿರ್ಮಿಸಿದೆ. ಎನ್ಸಿಆರ್ ಇದನ್ನ ‘ಪಿನಾಕಾ’ ಎಂದು ಹೆಸರಿಸಿತು ಮತ್ತು ಪೂರ್ವ ಮಧ್ಯ ರೈಲ್ವೆಯ ಲೋಡಿಂಗ್ ಸೈಟ್ಗಳಿಂದ ಕಲ್ಲಿದ್ದಲುಗಳನ್ನ ಸಾಗಿಸಲು ನಾಲ್ಕು ಖಾಲಿ ಬಾಕ್ಸ್ಎನ್ ರೇಕ್ಗಳನ್ನು ಸೇರಿಸುವ ಮೂಲಕ ಇದನ್ನ ರಚಿಸಿದೆ.
ಇದು ಸರಕು ರೈಲುಗಳ ಚಾಲನೆಯಲ್ಲಿ ತೊಡಗಿರುವ ರೈಲ್ವೆ ಸಿಬ್ಬಂದಿಯ ಪರಿಣಾಮಕಾರಿ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇನ್ನು ಸರಕುಗಳ ತ್ವರಿತ ಸಾಗಣೆಗೆ ಸಹಾಯ ಮಾಡುತ್ತದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಲ್ಲಿದ್ದಲನ್ನ ಸಾಗಿಸಲು ರೈಲಿನಲ್ಲಿ 232 ವ್ಯಾಗನ್ʼಗಳಿದ್ದವು ಮತ್ತು ನಾಲ್ಕು ರೇಕ್ʼಗಳನ್ನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ʼನಲ್ಲಿ ಜೋಡಿಸಲಾಯಿತು.
PINAKA launched from Chunar..
For the very first time in NCR, a long haul of 4 trains plied. Measuring 2.7 km, the Pinaka, destined for the coal loading sites of @ECRlyHJP was formed at Chunar today with 4 empty BOXN rakes.
A glimpse as it passes LUSA at 20:05 hrs.#mobility pic.twitter.com/KpVuxU6OYx— North Central Railway (@CPRONCR) September 3, 2022
ಅಂದ್ಹಾಗೆ, ಆಜಾದಿ ಕಾ ಅಮೃತ ಮಹೋತ್ಸವ್ ಆಚರಣೆಯ ಭಾಗವಾಗಿ ಆಗಸ್ಟ್ 15ರಂದು ಭಾರತದ ಅತಿ ಉದ್ದದ ಸರಕು ರೈಲು ಸೂಪರ್ ವಾಸುಕಿಯನ್ನ ಓಡಿಸುವ ಮೂಲಕ ಭಾರತೀಯ ರೈಲ್ವೆ ಕಳೆದ ತಿಂಗಳು ದಾಖಲೆಯನ್ನ ನಿರ್ಮಿಸಿದೆ. 3.5 ಕಿ.ಮೀ ಉದ್ದದ ಈ ರೈಲು 295 ತುಂಬಿದ ವ್ಯಾಗನ್ʼಗಳನ್ನ ಹೊಂದಿದ್ದು, ಐದು ಎಂಜಿನ್ ಗಳಿಂದ ಚಾಲಿತವಾಗಿದ್ದು, ಸುಮಾರು 27,000 ಟನ್ ಕಲ್ಲಿದ್ದಲನ್ನ ಹೊತ್ತೊಯ್ಯುತ್ತಿತ್ತು.
ಈ ಹಿಂದೆ, ಭಾರತೀಯ ರೈಲ್ವೆಯ ಆಗ್ನೇಯ ಮಧ್ಯ ರೈಲ್ವೆ (ಎಸ್ಇಸಿಆರ್) ವಲಯವು ಎರಡು ಸರಕು ರೈಲುಗಳನ್ನ ನಿರ್ವಹಿಸುತ್ತಿತ್ತು. ಅವು ಭಾರಿ ಉದ್ದದಿಂದಾಗಿ ಸಾಕಷ್ಟು ಕಣ್ಣುಗಳನ್ನ ಗಳಿಸಿದ್ವು. ಎರಡು ಸರಕು ಸಾಗಣೆ ರೈಲುಗಳಿಗೆ ‘ಸೂಪರ್ ಅನಕೊಂಡ’ ಮತ್ತು ‘ಶೇಶ್ ನಾಗ್’ ಎಂದು ಹೆಸರಿಸಲಾಯಿತು.
ಮೊದಲನೆಯದು ಸಂಪೂರ್ಣವಾಗಿ ತುಂಬಿದ ಮೂರು-ರೇಕ್ ಸಂಯೋಜಿತ ಸರಕು ರೈಲು, ಇದನ್ನ ‘ಸೂಪರ್ ಅನಕೊಂಡ’ ಎಂದು ಹೆಸರಿಸಲಾಯಿತು ಮತ್ತು ಅದರ ನಂತರ 2.8 ಕಿ.ಮೀ ಉದ್ದದ ನಾಲ್ಕು ಖಾಲಿ ಬಾಕ್ಸ್ಎನ್ ರೇಕ್ಸ್ ರೈಲನ್ನ ಒಟ್ಟಿಗೆ ಸಂಯೋಜಿಸಲಾಯಿತು, ಇದನ್ನು ‘ಶೇಶ್ ನಾಗ್’ ಎಂದು ಹೆಸರಿಸಲಾಯಿತು.