ಕಿಸ್ಮಾಯೊ (ಸೊಮಾಲಿಯಾ): ಸೊಮಾಲಿಯಾದ ಬಂದರು ನಗರ ಕಿಸ್ಮಾಯೊದಲ್ಲಿನ ಹೋಟೆಲ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭಾನುವಾರ ತಡರಾತ್ರಿ ಸ್ಫೋಟಕಗಳನ್ನು ತುಂಬಿದ ಕಾರು ಹೋಟೆಲ್ ತವಕಲ್ ಗೇಟ್‌ಗೆ ನುಗ್ಗಿ ದಾಳಿ ಮುಂದುವರೆಸಿದೆ. ನಂತರ ಭದ್ರತಾ ಪಡೆಗಳು ಬಂದೂಕುಧಾರಿಗಳನ್ನು ಹತ್ಯೆಗೈದವು. ದಾಳಿಯ ಹೊಣೆಯನ್ನು ಅಲ್-ಶಬಾಬ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಭದ್ರತಾ ಅಧಿಕಾರಿಗಳು ದಾಳಿಕೋರರಲ್ಲಿ ಮೂವರನ್ನು ಕೊಂದಿದ್ದು, ನಾಲ್ಕನೆಯವರು ಬಾಂಬ್ ಸ್ಫೋಟದಲ್ಲಿ ಸತ್ತರು ಎಂದು ಸೊಮಾಲಿಯಾದ ಜುಬ್ಬಾಲ್ಯಾಂಡ್‌ನ ಭದ್ರತಾ ಸಚಿವ ಯೂಸುಫ್ ಹುಸೇನ್ ಧುಮಾಲ್ ಹೇಳಿದ್ದಾರೆ.

ಸ್ಫೋಟದಲ್ಲಿ, ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 47 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಫೋಟ ಸಂಭವಿಸಿದ ಹೋಟೆಲ್ ಶಾಲೆಯ ಸಮೀಪದಲ್ಲಿದೆ. ಆದ್ದರಿಂದ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಧುಮಾಲ್ ಹೇಳಿದ್ದಾರೆ.‌

BIG NEWS: ಟಿ20ಯಲ್ಲಿ ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಿ ಮೋದಿ | PM Modi Congratulates Team India

BIGG NEWS : ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ಅತ್ಯಾಚಾರ ಆರೋಪ : ಯುವತಿಯಿಂದ ದೂರು ದಾಖಲು

BIG NEWS : ಈಶಾನ್ಯ ರಾಜ್ಯಗಳಿಗೆ ಸೈಕ್ಲೋನಿಕ್ ಚಂಡಮಾರುತ ʻಸಿಟ್ರಾಂಗ್ʼ ಭೀತಿ, ಐಎಂಡಿಯಿಂದ ಎಚ್ಚರಿಕೆ | Cyclone Sitrang

Share.
Exit mobile version