ಬೀಜಿಂಗ್: ಟಿಬೆಟ್‌ನ ನೈರುತ್ಯ ಪ್ರದೇಶದ ನೈಂಗ್‌ಚಿ ನಗರದಲ್ಲಿ ಉಂಟಾದ ಹಿಮಕುಸಿತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಮೃತದೇಹಗಳನ್ನು ಮತ್ತು ನಾಪತ್ತೆಯಾದವರ ಪತ್ತೆಗಾಗಿ ಚೀನಾ ಸರ್ಕಾರ ರಕ್ಷಣಾ ತಂಡವನ್ನು ಕಳುಹಿಸಿದೆ.
ಮಂಗಳವಾರ ರಾತ್ರಿ 8 ಗಂಟೆಗೆ (1200 GMT) ಮೈನ್ಲಿಂಗ್ ಕೌಂಟಿಯ ಪೈ ಹಳ್ಳಿ ಮತ್ತು ಮೆಡಾಗ್ ಕೌಂಟಿಯ ಡೊಕ್ಸಾಂಗ್ ಲಾ ಸುರಂಗದ ನಿರ್ಗಮನದ ನಡುವಿನ ರಸ್ತೆಯ ಒಂದು ವಿಭಾಗದಲ್ಲಿ ಹಿಮಕುಸಿತ ಸಂಭವಿಸಿದ್ದು, ಜನರು ಮತ್ತು ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.
ಸುಮಾರು 3,100 ಮೀಟರ್ (9,300 ಅಡಿ) ಸರಾಸರಿ ಎತ್ತರದಲ್ಲಿ ನೆಲೆಗೊಂಡಿರುವ ನೈಂಗ್‌ಚಿಯನ್ನು ಅನೇಕ ಪ್ರವಾಸಿ ಸಂಸ್ಥೆಗಳು “ಟಿಬೆಟ್‌ನ ಸ್ವಿಟ್ಜರ್ಲೆಂಡ್” ಎಂದು ಪರಿಗಣಿಸಿದ್ದಾರೆ.
SHOCKING NEWS: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು 67 ವರ್ಷದ ವ್ಯಕ್ತಿ ಸಾವು
SHOCKING NEWS: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು 67 ವರ್ಷದ ವ್ಯಕ್ತಿ ಸಾವು