ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ವರದಿಗಳ ಪ್ರಕಾರ, ಉದ್ಯೋಗಿಗಳ ಡಿಎ (DA) ಶೀಘ್ರದಲ್ಲೇ ಹೆಚ್ಚಾಗಬಹುದು. ಉದ್ಯೋಗಿಗಳು ಪ್ರಸ್ತುತ ಶೇಕಡಾ 31ರಷ್ಟು ತುಟ್ಟಿಭತ್ಯೆಯನ್ನ ಪಡೆಯುತ್ತಿದ್ದಾರೆ. ಆದ್ರೆ, ಅದು ಶೇಕಡಾ 34ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಡಿಎ ಬಾಕಿ ಶೀಘ್ರದಲ್ಲೇ ಬಿಡುಗಡೆ
ಡಿಎ ಹೆಚ್ಚಳದೊಂದಿಗೆ ಉದ್ಯೋಗಿಗಳು ಡಿಎ ಬಾಕಿಯನ್ನ ಸಹ ಪಡೆಯಬಹುದು ಎಂದು ವರದಿಯಾಗಿದೆ. ಕೇಂದ್ರ ನೌಕರರು 18 ತಿಂಗಳ ಡಿಎ ಬಾಕಿ ನೀಡಿಲ್ಲ. ಕೇಂದ್ರ ಸರ್ಕಾರಿ ನೌಕರರು ಅದರ ಬಿಡುಗಡೆಗಾಗಿ ಬಹಳ ಸಮಯದಿಂದ ಒತ್ತಾಯಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜನವರಿ 26ರ ಒಳಗೆ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸರ್ಕಾರವು ಡಿಎ ಬಾಕಿಯನ್ನು ನೀಡಿದರೆ ಉದ್ಯೋಗಿಗಳು ಉತ್ತಮ ಮೊತ್ತವನ್ನ ಪಡೆಯಬಹುದು.
Good News : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಸಿಹಿಸುದ್ದಿ : 3,467 ಕೋಟಿ ರೂ.`GST’ ಪರಿಹಾರ ಬಿಡುಗಡೆ
ಎಚ್ ಆರ್ ಎ ಹೆಚ್ಚಳ ಯಾವಾಗ?
ಕೇಂದ್ರ ನೌಕರರು ಮನೆ ಬಾಡಿಗೆ ಭತ್ಯೆ ಅಂದರೆ ಎಚ್ ಆರ್ ಎ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಜುಲೈ 2021ರಲ್ಲಿ ಡಿಎಯನ್ನು ಶೇಕಡಾ 28ಕ್ಕೆ ಹೆಚ್ಚಿಸಲಾಯಿತು. ಆ ಸಮಯದಲ್ಲಿ ಎಚ್ಆರ್ಎ ಅನ್ನು ಸಹ ಪರಿಷ್ಕರಿಸಲಾಯಿತು. ಪ್ರಸ್ತುತ, ಎಚ್ ಆರ್ ಎ ದರವು ನಗರ ವರ್ಗದಲ್ಲಿ ಶೇಕಡಾ 27, ಶೇಕಡಾ 18 ಮತ್ತು ಶೇಕಡಾ 9 ಆಗಿದೆ. ಕಳೆದ ಅಕ್ಟೋಬರ್ʼನಲ್ಲಿ ಸರ್ಕಾರ ಡಿಎಯನ್ನು ಶೇ.28ರಿಂದ ಶೇ.31ಕ್ಕೆ ಹೆಚ್ಚಿಸಿತ್ತು. ಅಂದಿನಿಂದ, ಉದ್ಯೋಗಿಗಳು ತಮ್ಮ ಎಚ್ ಆರ್ ಎ ಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಎಚ್ ಆರ್ ಎ ಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು ಮತ್ತು ಡಿಎ ಏರಿಕೆಯೊಂದಿಗೆ ಪರಿಷ್ಕರಿಸಲಾಗುವುದು ಎಂದು ಸರ್ಕಾರ 2015ರಲ್ಲಿ ಮನವಿ ಪತ್ರವನ್ನು ಹೊರಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.