ಸುಭಾಷಿತ :

Wednesday, April 1 , 2020 1:53 AM

`ಬಿಜೆಪಿ ಹಿರಿಯ ನಾಯಕರಿಗೆ’ ಗುಡ್ ನ್ಯೂಸ್ : 75 ವರ್ಷ ದಾಟಿದವರಿಗೂ `ಕಮಲ’ ಟಿಕೆಟ್!?


Saturday, March 9th, 2019 8:20 am

ನವದೆಹಲಿ : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆಯಲ್ಲಿ ತೊಡಗಿರುವ ಬಿಜೆಪಿ 75 ವರ್ಷ ದಾಟಿದ ನಾಯಕರಿಗೆ ಟಿಕೆಟ್ ನೀಡಬಾರದೆಂಬ ಪ್ರಸ್ತಾಪಕ್ಕೆ ಅಮಿತ್ ಶಾ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

75 ವರ್ಷ ದಾಟಿದವರಿಗೆ ಟಿಕೆಟ್ ನಿರಾಕರಿಸಿದರೆ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಮತ್ತು ಕಲ್ರಾಜ್ ಮಿಶ್ರಾ, ಸುಮಿತ್ರಾ ಮಹಾಜನ್, ಹುಕುಂ ದೇವ್ ನಾರಾಯಣ್ ಸಿಂಗ್ ಯಾದವ್, ಬಿ.ಎಸ್. ಯಡಿಯೂರಪ್ಪ ಮುಂತಾದ ಹಿರಿಯ ಮುಖಂಡರಿಗೆ ಟಿಕೆಟ್ ನಿರಾಕರಿಸಬೇಕಾಗುತ್ತದೆ. ಆದರೆ ಇಂತಹ ಪ್ರಮುಖ ನಾಯಕರನ್ನು ಕೈಬಿಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014 ರ ಚುನಾವಣೆಯಲ್ಲಿ ಗೆಲುವಿನ ಬಳಿಕ 75 ವರ್ಷ ದಾಟಿದ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವ ಕುರಿತು ಮೋದಿ ನಿರ್ಧಾರ ತಳೆದಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಜ್ಯ ಸಭೆ ಹಾಗೂ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡದಿರುವ ಕುರಿತೂ ಚರ್ಚೆ ನಡೆಯಿತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions