ಬೆಂಗಳೂರು : ಮೊಮ್ಮಗಳಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ 70 ವರ್ಷದ ವೃದ್ದನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಕೋರ್ಟ್ ಆದೇಶ ಹೊರಡಿಸಿದೆ.
70 ವರ್ಷದ ವೃದ್ದ ರಮೇಶ್ ತನ್ನ ಮೊಮ್ಮಗಳಿಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದನು. ಬಾಲಕಿಗೆ 3 ನೇ ತರಗತಿಯಿಂದ 8 ನೇ ತರಗತಿವರೆಗೂ ಅತ್ಯಾಚಾರ ಎಸಗುತ್ತಿದ್ದನು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆದರಿಸಿ ಕೃತ್ಯ ಎಸಗುತ್ತಿದ್ದ ರಮೇಶ್ ಯಾರಿಗಾದರೂ ಹೇಳಿದ್ರೆ ನಿನ್ನ ತಂದೆಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದನು. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ತ್ವರಿತ ನ್ಯಾಯಾಲಯ ರಮೇಶನಿಗೆ 20 ವರ್ಷ ಜೈಲು ಶಿಕ್ಷೆ, 1.3 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿ ಮರು ಪರಿಶೀಲಿಸಿ ವರದಿ ನೀಡಿ : ಕೊಡಗು ಡಿಸಿ ಸತೀಶ್ ಸೂಚನೆ
‘ನಾನು ಹಿಂದೂ ಧರ್ಮದ ಬಗ್ಗೆ ಮಾತನಾಡಿಲ್ಲ, ಅದಕ್ಕೆ ವಿರೋಧವಿಲ್ಲ’ : ಸಿದ್ದರಾಮಯ್ಯ ಯೂ ಟರ್ನ್