ಗುವಾಹಟಿ(ಅಸ್ಸಾಂ): ಉದ್ಧವ್ ಠಾಕ್ರೆ ಸರ್ಕಾರಕ್ಕೆ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರು ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾರೆ. ಇಲ್ಲಿ ಏಳು ದಿನಗಳ ಕಾಲ 70 ರೂಮ್‌ಗಳನ್ನು ಕಾಯ್ದಿರಿಸಲಾಗಿದ್ದು, ದಿನಕ್ಕೆ ಲಕ್ಷಾಂತರ ರೂ. ಚಾರ್ಜ್ ಆಗುತ್ತಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಮೈತ್ರಿಕೂಟವನ್ನು ಶಿವಸೇನಾ ತ್ಯಜಿಸಬೇಕು ಎಂದು ಒತ್ತಾಯಿಸಿ, ಏಕನಾಥ್ ಶಿಂಧೆ ನೇತೃತ್ವದ ಸುಮಾರು 40 ಶಾಸಕರು ಸೋಮವಾರ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿದ್ದರು. ನಂತ್ರ ಅವರು ಅಲ್ಲಿಂದ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂನ ಗುವಾಹಟಿಗೆ ಬುಧವಾರ ಬಂದು ಐಷಾರಾಮಿ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ.
ಗುವಾಹಟಿಯ ರಾಡಿಸನ್ ಬ್ಲೂ ಐಷಾರಾಮಿ ಹೋಟೆಲ್‌ನಲ್ಲಿ ಏಳು ದಿನಗಳ ಕಾಲ 70 ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಇಲ್ಲಿ ದಿನಕ್ಕೆ ಆಹಾರ ಮತ್ತು ಇತರ ಸೇವೆಗಳ ದೈನಂದಿನ ಅಂದಾಜು ವೆಚ್ಚ 8 ಲಕ್ಷ ಅಂದ್ರೆ, 7 ದಿನಕ್ಕೆ ಬರೋಬ್ಬರಿ 56 ಲಕ್ಷ ರೂ. ಬಿಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹೋಟೆಲ್, ಶಾಸಕರು ಮತ್ತು ಅವರ ತಂಡಗಳಿಗಾಗಿ ಕಾಯ್ದಿರಿಸಿದ 70 ಕೊಠಡಿಗಳನ್ನು ಹೊರತುಪಡಿಸಿ, 196 ಕೊಠಡಿಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, ವಿಶಾಲವಾದ ಸಭಾಂಗಣ, ಹೊರಾಂಗಣ ಪೂಲ್, ಸ್ಪಾ ಮತ್ತು ಐದು ರೆಸ್ಟೋರೆಂಟ್‌ಗಳನ್ನು ಹೊಂದಿದೆ.
“ನಾವು ಮಹಾರಾಷ್ಟ್ರದ ಎಂವಿಎ (ಮಹಾ ವಿಕಾಸ್ ಅಘಾಡಿ) ಸರ್ಕಾರದಿಂದ ಹೊರನಡೆಯಲು ಸಿದ್ಧರಿದ್ದೇವೆ. ಆದರೆ, ಪಕ್ಷದ ಬಂಡುಕೋರರು 24 ಗಂಟೆಗಳಲ್ಲಿ ಮುಂಬೈಗೆ (ಗುವಾಹಟಿಯಿಂದ) ಹಿಂತಿರುಗಬೇಕು ಮತ್ತು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಬೇಕು” ಎಂದು ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
Big News: ಇದೇ ಮೊದಲ ಬಾರಿಗೆ: ಮುಂದಿನ ವರ್ಷ ಜಮ್ಮು & ಕಾಶ್ಮೀರದಲ್ಲಿ G-20 ಶೃಂಗಸಭೆ ಆಯೋಜನೆ!
BIG NEWS: ‘ದ್ವಿಚಕ್ರ ವಾಹನ’ ಖರೀದಿಸೋರಿಗೆ ಶಾಕಿಂಗ್ ನ್ಯೂಸ್: ಜುಲೈ.1ರಿಂದ ‘ಹೀರೋ ಬೈಕ್’ ಬೆಲೆ ಹೆಚ್ಚಳ