ಮನಿಲಾ: ಉತ್ತರ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ 7.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಎತ್ತರದ ಗೋಪುರಗಳನ್ನು ಅಲುಗಾಡಿಸಿದ ಭೂಕಂಪವು 8:43 am (0043 GMT) ಲುಜಾನ್‌ನ ಮುಖ್ಯ ದ್ವೀಪದಲ್ಲಿರುವ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಭೂಕಂಪದ ಅನುಭವದಿಂದ ಡೊಲೊರೆಸ್‌ನಲ್ಲಿ ಭಯಭೀತರಾದ ಜನರು ತಮ್ಮ ಕಟ್ಟಡದಿಂದ ಹೊರಗೆ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ.

ಭೂಕಂಪವು ತುಂಬಾ ಪ್ರಬಲವಾಗಿದೆ. ಇಲ್ಲಿಯವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Karnataka Weather Today : ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಭಾರೀ ಮಳೆ

ಬೆಲೆ ಏರಿಕೆ ಎಫೆಕ್ಟ್ : ಕಲ್ಯಾಣ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ವಿತರಣೆ

Big news:‌ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಮತ್ತೆ ಸೋನಿಯಾ ಗಾಂಧಿಗೆ ಇಡಿ ಡ್ರಿಲ್‌

Share.
Exit mobile version