ಬೊಗೊಟಾ (ಕೊಲಂಬಿಯಾ): ಪಶ್ಚಿಮ ಕೊಲಂಬಿಯಾದ ಟೊಲುವಾ ನಗರದ ಜೈಲಿನಲ್ಲಿ ಮಂಗಳವಾರ ನಡೆದ ಗಲಭೆಯಲ್ಲಿ ಕೈದಿಗಳು ಅಲ್ಲಿದ್ದ ಹಾಸಿಗೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ 51 ಕೈದಿಗಳು ಸಾವನ್ನಪ್ಪಿದ್ದು, ಗಾರ್ಡ್‌ಗಳು ಸೇರಿದಂತೆ 24 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೊಲಂಬಿಯಾದ ನ್ಯಾಯ ಮಂತ್ರಿ ವಿಲ್ಸನ್ ರೂಯಿಜ್ ಮಾಧ್ಯಮಗಳೊಂದಿಗೆ ಮಾತನಾಡಿ, ನಿನ್ನೆ ಸುಮಾರು 2 ಗಂಟೆಗೆ (ಸ್ಥಳೀಯ ಸಮಯ) ಕೈದಿಗಳ ನಡುವೆ ಜಗಳ ಪ್ರಾರಂಭವಾಯಿತು. ಗದ್ದಲದ ಸಮಯದಲ್ಲಿ ಒಬ್ಬ ಕೈದಿಯು ಹಾಸಿಗೆಗೆ ಬೆಂಕಿ ಹಚ್ಚಿದ್ದಾನೆ. ನಂತರ ಬೆಂಕಿ ಎಲ್ಲೆಡೆ ಹರಡಿದ ಪರಿಣಾಮ, ಬೆಂಕಿ ತಗುಲಿ 51 ಕೈದಿಗಳು ಸಾವನ್ನಪ್ಪಿದ್ದು, ಗಾರ್ಡ್‌ಗಳು ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಪ್ರಯತ್ನಿಸಿದ್ದಾರೆ ಎಂದ್ದಾರೆ.
ಕೊಲಂಬಿಯಾದ ಕಾರಾಗೃಹಗಳು ಕುಖ್ಯಾತವಾಗಿ ಕಿಕ್ಕಿರಿದು ತುಂಬಿವೆ. ಈ ಘಟನೆಯು ದೇಶದ ಇತ್ತೀಚಿನ ಇತಿಹಾಸದಲ್ಲಿ ಈ ರೀತಿಯ ಮಾರಣಾಂತಿಕ ಘಟನೆಗಳಲ್ಲಿ ಒಂದಾಗಿದೆ. ಕಾರಾಗೃಹಗಳಲ್ಲಿ ಮಾರಣಾಂತಿಕ ಹೋರಾಟ ಮತ್ತು ಗಲಭೆಗಳು ಕೊಲಂಬಿಯಾ ಮತ್ತು ನೆರೆಯ ದೇಶಗಳಲ್ಲಿ ಸಾಮಾನ್ಯವಲ್ಲ ಎಂದು ವರದಿಯಾಗಿದೆ.
BIGG NEWS : ಹೊಸ ಜಿಎಸ್‌ಟಿ ನಿಯಮ : ಯಾವುದು ಅಗ್ಗ?, ಯಾವುದು ದುಬಾರಿ ? : ಇಲ್ಲಿದೆ ಮಹತ್ವದ ಮಾಹಿತಿ | New GST rule