ಭೋಪಾಲ್: ಐದು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ತನ್ನ ತಾಯಿಯ ಮಡಿಲಲ್ಲೇ ಪ್ರಾಣ ಬಿಟ್ಟ ಮನಕಲುಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಸಂಜಯ್ ಪಾಂಡ್ರೆ ಮತ್ತು ಅವರ ಕುಟುಂಬದವರು ಪುಟ್ಟ ರಿಷಿಯ ಅನಾರೋಗ್ಯದ ಕಾರಣ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದ್ರೆ, ಆಸ್ಪತ್ರೆ ಆವರಣದಲ್ಲಿ ಗಂಟೆಗಟ್ಟಲೆ ಕಾದು ಕುಂತರೂ ಒಬ್ಬ ವೈದ್ಯ ಅಥವಾ ವೈದ್ಯಾಧಿಕಾರಿಯೂ ಅಸ್ವಸ್ಥಗೊಂಡ ಮಗುವಿಗೆ ಚಿಕಿತ್ಸೆ ನೀಡಲಿಲ್ಲ. ಇದರಿಂದಾಗಿ ಮಗು ತಾಯಿಯ ಮಡಿಲಲ್ಲೇ ಕೊನೆಯುಸಿರೆಳೆದಿದೆ.

ಈ ಘಟನೆಯು ರಾಜ್ಯದಲ್ಲಿನ ಕಳಪೆ ಆರೋಗ್ಯ ಮೂಲಸೌಕರ್ಯಗಳ ದೂರುಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಮಗು ಸಾವನ್ನಪ್ಪಿದ ಗಂಟೆಗಳ ನಂತರವೂ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾದ ವೈದ್ಯರಾಗಲಿ ಅಥವಾ ವೈದ್ಯಾಧಿಕಾರಿಯಾಗಲಿ ಲಭ್ಯವಿಲ್ಲ ಎಂದು ಕುಟುಂಬ ಆರೋಪಿಸಿದೆ.

BIGG NEWS: ಅಬುಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್.‌ ಜೈಶಂಕರ್

SHOCKING NEWS: ‘ತನ್ನ ಆರ್ಡರ್‌ ತಲುಪಿಸಲು ಮುಸ್ಲಿಂ ಡೆಲಿವರಿ ಬಾಯ್‌ ಬೇಡ’ವೆಂದ ಸ್ವಿಗ್ಗಿ ಗ್ರಾಹಕ: ನೆಟ್ಟಿಗರಿಂದ ಆಕ್ರೋಶ ವ್ಯಕ್ತ

BIGG NEWS : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 1,046 ಕೋಟಿ ರೂ. ಬಿಡುಗಡೆ

Share.
Exit mobile version