*ಉಮಾ
ಬೆಂಗಳೂರು: ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿ – ಪಿಎಸ್‌ಐ (402) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ. ಸರ್ಕಾರದ ಆದೇಶ ಸಂಖ್ಯೆ ಒಇ 22 ಪಿಇಐ 2024 ದಿನಾಂಕ 22-02-2024 ರನ್ವಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು (ಮಿಕ್ಕುಳಿದ) ಮತು ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ಸದರಿ ನೇಮಕಾತಿಯ ಹುದ್ದೆಗಳ ಸಂಬಂಧ ಲಿಖಿತ ಪರೀಕ್ಷೆಗೆ ದಿನಾಂಕ 08.05.2024 ನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಅಂತ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

Share.
Exit mobile version